Ad imageAd image

ರಾಘವೇಂದ್ರ ಎಚ್ ಟಿ ಅವರ ಹುಟ್ಟು ಹಬ್ಬದ ನಿಮಿತ್ತ ಆಶ್ರಮದ ಮಕ್ಕಳಿಗೆ ಹಣ್ಣು ಹಂಪಲು ಊಟ ವಿತರಣೆ 

Bharath Vaibhav
ರಾಘವೇಂದ್ರ ಎಚ್ ಟಿ ಅವರ ಹುಟ್ಟು ಹಬ್ಬದ ನಿಮಿತ್ತ ಆಶ್ರಮದ ಮಕ್ಕಳಿಗೆ ಹಣ್ಣು ಹಂಪಲು ಊಟ ವಿತರಣೆ 
WhatsApp Group Join Now
Telegram Group Join Now

ಬೆಂಗಳೂರು : ಮನುಷ್ಯನು ಹುಟ್ಟಿ ಬಂದು ಮೇಲೆ ಸಮಾಜದ ಅಭಿವೃದ್ಧಿಗೆ ಬಡವರ ಕೂಲಿ ಕಾರ್ಮಿಕರ ದೀನದಲಿತರ ಕಾಳಜಿ ಹೊಂದಿದ ಏಕೈಕ ವ್ಯಕ್ತಿ ಎಂದರೆ ಹಿಂದುಳಿದ ವರ್ಗಗಳ (ಪ್ರವರ್ಗ1 ಮತ್ತು2A) ಗುತ್ತಿಗೆದಾರರ ಸಂಘದ ರಾಜ್ಯ ಉಪಾಧ್ಯಕ್ಷ ರಾಘವೇಂದ್ರ ಎಚ್ ಟಿ ಅವರು ಎಂದರೆ ತಪ್ಪಾಗಲಾರದು ಎಂದು ಭೀಮ ಸಂದೇಶ ಪತ್ರಿಕೆಯ ಸಂಪಾದಕ ಹಾಗೂ ಅಹಿಂದ ರಕ್ಷಣಾ ಸಮಿತಿ ಸಂಸ್ಥಾಪಕ ರಾಜ್ಯಾಧ್ಯಕ್ಷ ನರಸಿಂಹಮೂರ್ತಿ ವೈ .ಜಿ ಹೇಳಿದರು.

ಕಾಚೋಹಳ್ಳಿಯಲ್ಲಿರುವ ಜನಸೇವಾ ಸಮೃದ್ಧಿ ಆಶ್ರಮದ ಹಾಗೂ ಅಹಿಂದಾ ರಕ್ಷಣಾ ಸಮಿತಿ ವತಿಯಿಂದ ಆಶ್ರಮದಲ್ಲಿ ಮಕ್ಕಳೊಂದಿಗೆ ರಾಘವೇಂದ್ರ ಎಚ್ ಟಿ ಅವರ ಹುಟ್ಟು ಹಬ್ಬದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಘವೇಂದ್ರ ಎಚ್ ಟಿ ಅವರಿಗೆ ಶಾಲು ಹೊದಿಸಿ ಮೈಸೂರು ಪೆಟೆ ಧರಿಸಿ ಫಲಪುಷ್ಪದೊಂದಿಗೆ ಗೌರವಿಸಿ ಕೆಕ್ ಕತ್ತರಿ ಸಿಹಿ ತಿನ್ನಿಸಿ ಶುಭ ಕೋರಿ ರಾಘವೇಂದ್ರ ಅವರಿಗೆ ಭಗವಂತ ಆರೋಗ್ಯ ಆಯುಷ್ಯ ಐಶ್ವರ್ಯ ಸಕಲ ಸಂಪತ್ತು ಕರುಣಿಸಿ ಎಂದು ವೈ ಜಿ ನರಸಿಂಹಮೂರ್ತಿ ಮಾತಾಡಿದರು.

ಈ ಸಂದರ್ಭದಲ್ಲಿ ಅಹಿಂದ ರಕ್ಷಣಾ ಸಮಿತಿಯ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಮಂಜುನಾಥ್ ಎಚ್, ದರ್ಶನ್ ,ಕಿರಣ್, ಶಿವಕುಮಾರ್, ರಂಗನಾಥ್, ಅಭಿಷೇಕ್, ಸಾಗರ್, ಆನಂದ್ , ಗಿರೀಶ್ ಬಿ, ಸಂತೋಷ್, ಸಂತು, ರವಿಕುಮಾರ್, ಸೇರಿದಂತೆ ರಾಘವೇಂದ್ರ ಅವರ ಅಭಿಮಾನಿಗಳು ಮುಂತಾದವರು ರಾಘವೇಂದ್ರ ಅವರಿಗೆ ಹೂವು ಗುಚ್ಚು ನೀಡಿ ಶುಭ ಹಾರೈಸಿದರು.

ವರದಿ : ಅಯ್ಯಣ್ಣ ಮಾಸ್ಟರ್

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!