Ad imageAd image

ಲಿಂಗಸುಗೂರು ಕೆಡಿಪಿ ಗೆ ನೂತನ ಸದಸ್ಯರಾದ ಆಯ್ಕೆಯಾದ ರಾಘವೇಂದ್ರ ಎನ್. ಕುದುರಿ ಸನ್ಮಾನ..

Bharath Vaibhav
ಲಿಂಗಸುಗೂರು ಕೆಡಿಪಿ ಗೆ ನೂತನ ಸದಸ್ಯರಾದ ಆಯ್ಕೆಯಾದ ರಾಘವೇಂದ್ರ ಎನ್. ಕುದುರಿ ಸನ್ಮಾನ..
WhatsApp Group Join Now
Telegram Group Join Now

ಮುದಗಲ್ಲ : ಲಿಂಗಸುಗೂರು ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ಡಿ ಎಸ್ ಹೂಲಗೇರಿ ಅವರ ಮುದಗಲ್ ಪಟ್ಟಣದ ನಿವಾಸದಲ್ಲಿ ಲಿಂಗಸುಗೂರು ಕೆಡಿಪಿ ಗೆ ನೂತನ ಸದಸ್ಯರಾಗಿ ಆಯ್ಕೆಯಾದ ಮಾಜಿ ಶಾಸಕರ ಆಪ್ತ ಸಹಾಯಕರಾದ ಶ್ರೀ ರಾಘವೇಂದ್ರ ಎನ್. ಕುದುರಿ ಇವರನ್ನು ರಾಜ್ಯಾಧ್ಯಕ್ಷರಾದ ಸುರೇಶ ಭಂಡಾರಿ ಇವರ ನೇತೃತ್ವದಲ್ಲಿ ಕನಾ೯ಟಕ ರಾಜ್ಯ ವಿಕಲಚೇತನರ ಆರ್ ಪಿ ಡಿ ಟಾಸ್ಕ್ ಪೋಸ೯ ಸಮಿತಿಯ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ರಾಘವೇಂದ್ರ ಕುದುರಿ ನನ್ನ ಅಧಿಕಾರದ ಅವಧಿಯಲ್ಲಿ ವಿಕಲಚೇತನರ ಸಮಸ್ಯೆಗಳಿಗೆ ಸ್ಪಂದಿಸಿ ಅವರಿಗೆ ನ್ಯಾಯಬದ್ಧವಾದ ಹಕ್ಕುಗಳು ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಸಹಕಾಯ೯ದಶಿ೯ ಅಸ್ಕಿಹಾಳ ನಾಗರಾಜ. ಜಿಲ್ಲಾ ಖಜಾಂಚಿ ಹುಸೇನಬಾಷಾ ಬನ್ನಿಗೋಳ. ಸದಸ್ಯರಾದ ರಹಿಮಾನ್ ದುಲಾ. ಬಂದಗಿಸಾಬ ಆಮದಿಹಾಳ. ಶರಣಪ್ಪ ತೆರೆಭಾವಿ. ಶಿವಾನಂದ ಮಟ್ಟೂರು. ಭರಮಪ್ಪ.ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ:ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!