Ad imageAd image

ಕಳೆದ ಎಂ.ಪಿ. ಎಲೆಕ್ಷನ್ ನಲ್ಲಿ ಚಿತ್ರದುರ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿದ್ದ ರಘುಕುಮಾರ್,ಸಹಚರರು ಪೊಲೀಸರ ಅತಿಥಿ

Bharath Vaibhav
ಕಳೆದ ಎಂ.ಪಿ. ಎಲೆಕ್ಷನ್ ನಲ್ಲಿ ಚಿತ್ರದುರ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿದ್ದ ರಘುಕುಮಾರ್,ಸಹಚರರು ಪೊಲೀಸರ ಅತಿಥಿ
WhatsApp Group Join Now
Telegram Group Join Now

ಮೊಳಕಾಲ್ಮೂರು :– ಕಳೆದ ಎಂಪಿ ಎಲೆಕ್ಷನ್ ನಲ್ಲಿ ಚಿತ್ರದುರ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ 2337 ಮತ ಪಡೆದಿದ್ದ ರಘುಕುಮಾರ್ ಹಾಗೂ ಕಿಂಗ್ ಪಿನ್ ಜಗದೀಶ್ ದರ್ಶನ್ ಸೇರಿದಂತೆ ಒಟ್ಟು ಮೂವರನ್ನು ಮಂಗಳವಾರ ಮೊಳಕಾಲ್ಮೂರು ಪೊಲೀಸರು ಕಳ್ಳತನದ ಆರೋಪದಿಂದ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಕರೆತಂದು ಆರೋಗ್ಯ ತಪಾಸಣೆ ನಡೆಸಿದರು.

ರಾಜಕಾರಣಿಗಳು ಸಹಜವಾಗಿ ಚುನಾವಣೆ ಪರ್ವದಲ್ಲಿ ಮತ ಬೇಟೆ ಕ್ಷೇತ್ರ ಸಂಚಾರ ಮಾಡುತ್ತಾರೆ ಆದರೆ ಕಳೆದ ಎಂಪಿ ಚುನಾವಣೆ ಪಕ್ಷೇತರ ಅಭ್ಯರ್ಥಿಯಾಗಿ ಕಳ್ಳತನಕ್ಕೆ ಸ್ಕೆಚ್ ಹಾಕಲು ಕ್ಷೇತ್ರ ಸುತ್ತಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಕಳೆದ ಎರಡು ತಿಂಗಳ ಹಿಂದೆ ತಾಲೂಕಿನ ರಾಯಪುರದಿಂದ ತುಮಕೂರ್ಲಾ ಹಳ್ಳಿ ಸಂಪರ್ಕ ರಸ್ತೆಯಲ್ಲಿನ ಶಿಲ್ಪಾ ಬಾರ್ ಕಳ್ಳತನವಾಗಿತ್ತು. ಈ ಸಂಬಂಧ ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕಳೆದ 15 ದಿನಗಳ ಹಿಂದೆ ಒಂಟಿ ಬಾರ್ ಗುರಿಯಾಗಿಸಿ ಕಳ್ಳತನ ಮಾಡುತ್ತಿದ್ದ ಇವರನ್ನು ಚಿಕ್ಕಮಂಗಳೂರ ಪೊಲೀಸರು ಬಂದಿಸಿ ಜೈಲಘಟ್ಟಿದ್ದರು

ತಾಲೂಕಿನ ಶಿಲ್ಪಾ ಬಾರ್ ಕಳ್ಳತನ ಪ್ರಕರಣದ ತನಿಖೆಯಲ್ಲಿದ್ದ ಸ್ಥಳೀಯ ಪೊಲೀಸರು ಚಿಕ್ಕಮಂಗಳೂರು ಜೈಲಲಿದ್ದ ಈ ಮೂವರನ್ನು ಸೋಮವಾರ ಪಟ್ಟಣಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಇಲ್ಲಿ ಕಳ್ಳತನ ಮಾಡಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ.

ಚಿತ್ರದುರ್ಗ ದಾವಣಗೆರೆ ತುಮಕೂರು ಚಿಕ್ಕಮಂಗಳೂರು ಸೇರಿದಂತೆ ಒಟ್ಟು ನಾಲ್ಕು ಜಿಲ್ಲೆಗಳಲ್ಲಿಯೂ ಈ ತಂಡದವರು ಕಳ್ಳತನ ಮಾಡಿದ ಏಳೆಂಟು ಪ್ರಕರಣಗಳು ದಾಖಲಾಗಿವೆ.
ಒಂಟಿ ಬಾರಿಗಳನ್ನೇ ಟಾರ್ಗೆಟ್ ಮಾಡಿ ಸಂಚುರೂಪಿಸಿ ಮಾಸ್ಕ್ ಧರಿಸಿ ಕಳ್ಳತನಕ್ಕೆ ಮುಂದಾಗುತ್ತಿದ್ದರು.

ಕಳೆದ ಎಂಪಿ ಚುನಾವಣೆ ಸೂತ ಬಳಿಕ ಕಳ್ಳತನ ದಂದೆಗೆ ಇಳಿದಿದ್ದಾರೆ ಬಾರ್ ಗಳಲ್ಲಿದ್ದ ಸಿಸಿ ಕ್ಯಾಮೆರಾ ಡಿವಿಆರ್ ಗಳನ್ನು ವತ್ತೊಯ್ಯುತ್ತಿದ್ದರು ಎಂಬ ಮಾಹಿತಿ ಪೋಲೀಸರ ವಿಚಾರಣೆ ವೇಳೆ ಬಯಲಾಗಿದೆ ಈ ಮೂವರನ್ನು ಮಂಗಳವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಒಟ್ಟಿನಲ್ಲಿ ಕ್ಷೇತ್ರ ಸುದ್ದಿ ಜನಗಳ ಕಷ್ಟಗಳನ್ನು ಆಲಿಸದೆ ಬಾರ್ ಗಳನ್ನು ಹುಡುಕುತ್ತಾ ಹೋಗಿದ್ದಾರೆ ಇವರ ಬಂಧನದ ನಂತರ ಸ್ಥಳೀಯ ಪೊಲೀಸರು ಆಕ್ಟಿವ್ ಆಗಿ ಒಂಟಿ ಮನಗಳ ಸುತ್ತ ಪೊಲೀಸರು ಎಚ್ಚರಿಕೆ ನೀಡುತ್ತಿದ್ದಾರೆ ಎಂದು ಬಲ್ಲ ಮೂಲಗಳ ಮಾಹಿತಿಯಾಗಿದೆ.

ಒಟ್ಟಿನಲ್ಲಿ ರಾಜಕಾರಣಿಯೋಬ್ಬ ಜೈಲಿನ ಅತಿಥಿಯಾಗಿ ಕಂಬಿ ಎಣಿಸುವ ಸ್ಥಿತಿ ಬಂದಾಗಿದೆ.ಈ ಸಂದರ್ಭದಲ್ಲಿ ಸಿಪಿಐ ವಸಂತ ಅಸೋಡೆ, ಕ್ರೈಂ ಸಬ್ ಇನ್ಸ್ಪೆಕ್ಟರ್ ಈರೇಶ್, ಮತ್ತು ಪೊಲೀಸರು ಉಪಸ್ಥಿತರಿದ್ದರು.

ವರದಿ :-ಪಿಎ ಗಂಗಾಧರ

 

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!