ಬಳ್ಳಾರಿ: ದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ್ರೆ ಬಿಜೆಪಿ ಸರ್ಕಾರ ಜಾರಿಗೆ ತಂದಿರುವಂತ ಅಗ್ನಿವೀರ್ ಯೋಜನೆ ರದ್ದುಗೊಳಿಸುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಘೋಷಣೆ ಮಾಡಿದ್ದಾರೆ.
ಬಳ್ಳಾರಿಯ ಪ್ರಜಾಧ್ವನಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದಂತ ಅವರು, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿ, ಅಧಿಕಾರಕ್ಕೆ ಬಂದ್ರೆ ಅಗ್ನಿವೀರ್ ಯೋಜನೆ ರದ್ದು ಪಡಿಸುುತ್ತೇವೆ ಎಂದರು.
ಸದ್ಯ ಇರುವಂತ ಜಿಎಸ್ಟಿ ಬದಲಿ ಸರಳ ಜಿಎಸ್ಟಿ ಯೋಜನೆ ಜಾರಿಗೆ ತರಲಾಗುತ್ತದೆ. ಸರಳ ಜಿಎಸ್ಟಿಯಿಂದ ರೈತರು, ಬಡವರು, ಕಾರ್ಮಿಕರಿಗೆ ನೆರವಾಗಲಿದೆ ಎಂದರು.
ಕರ್ನಾಟಕಕ್ಕೆ ಬರಬೇಕಾಗಿದ್ದಂತ 18000 ಕೋಟಿ ಹಣವನ್ನು ಬಿಜೆಪಿ ಅಲ್ಲ ಭಾರತೀಯ ಚೊಂಬು ಪಾರ್ಟಿ ಕೊಟ್ಟಿಲ್ಲ. ಕರ್ನಾಟಕಕ್ಕೆ 18000 ಕೋಟಿ ಬರ ಪರಿಹಾರ ಕೊಡಬೇಕಾಗಿದೆ. ಆದ್ರೇ ಬಿಜೆಪಿ ಕೊಡದೇ ಚೊಂಬು ಕಟ್ಟಿದೆ ಎಂದರು.
ಬಳ್ಳಾರಿ ಜಿಲ್ಲೆಯ ಜನರಿಗೆ ಈ ಹಿಂದೆ ನಾನು ಒಂದು ಭರವೆಸೆ ನೀಡಿದ್ದೆ. ಐದು ಗ್ಯಾರಂಟಿ ಕೊಡುವ ಭರವಸೆ ನೀಡಿದ್ದೆನು. ಅದರಂತೆ ಐದು ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ಎಂದು ಹೇಳಿದರು.