Ad imageAd image

ರಾಹುಲ್ ಗಾಂಧಿ ಮನಸ್ಥಿತಿ ಕಾಗೆ ಬಾಯಲ್ಲಿ ಅಪಶಕುನ ನುಡಿಸಿದೆ : ಬಿ. ವೈ ವಿಜಯೇಂದ್ರ

Bharath Vaibhav
BY VIJENDRA
WhatsApp Group Join Now
Telegram Group Join Now

ಬೆಳಗಾವಿ : ಮೋದಿ ಸತ್ತರೆ ಮುಂದೆ ಯಾರು ಪ್ರಧಾನಿ ಆಗೋದೇ ಇಲ್ವಾ? ಎಂದು ಕಾಂಗ್ರೆಸ್ ಶಾಸಕ ರಾಜುಕಾಗೆ ಹೇಳಿಕೆಗೆ ಇದೀಗ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ತಿರುಗೇಟು ನೀಡಿದ್ದು, ರಾಹುಲ್ ಗಾಂಧಿ ಮನಸ್ಥಿತಿ ಕಾಗೆ ಬಾಯಲ್ಲಿ ಅಪಶಕುನ ನುಡಿಸಿದೆ ಎಂದು ವಾಗ್ದಾಳಿ ನಡೆಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಾವುಗಳನ್ನು ಆಧರಿಸಿ ಅಧಿಕಾರಗಳನ್ನು ಗಳಿಸಿದ ಕಾಂಗ್ರೆಸ್ಸಿಗರು,ಅಮೂಲ್ಯ ಜೀವಗಳ ಸಾವುಗಳಿಗಾಗಿ ಚಡಪಡಿಸುವುದು ಕಾಂಗ್ರೆಸ್ ಪಕ್ಷದ ಹೀನ ಸಂಸ್ಕೃತಿಯ ದ್ಯೋತಕವಾಗಿದೆ ಎಂದು ಆಕ್ರೋಶ ಹೊರಹಾಕಿದರು.

ಮೋದಿಯವರ ಸಾವು ಕಾಂಗ್ರೆಸ್ ಏಕೆ ಬಯಸುತ್ತದೆ? ಆರ್ಟಿಕಲ್ 370 ರದ್ದುಗೊಳಿಸಿ ಕಾಶ್ಮೀರವನ್ನು ಉಳಿಸಿದ್ದಕ್ಕಾಗಿಯೇ? ಐದು ಶತಮಾನಗಳ ಭಾರತೀಯರ ಕನಸು ಈಡೇರಿಸಲು ರಾಮಮಂದಿರ ನಿರ್ಮಾಣ ಮಾಡಿದ ಕಾರಣಕ್ಕಾಗಿಯೇ? ಅಥವಾ ದೇಶವನ್ನು ಮುಖ್ಯ ತಿನ್ನುತ್ತಿದ್ದ ಭಯೋತ್ಪಾದಕತೆಯನ್ನು ನಿಯಂತ್ರಿಸಿದಕ್ಕ? ಎಂದು ಪ್ರಶ್ನಿಸಿದರು.

 

WhatsApp Group Join Now
Telegram Group Join Now
Share This Article
error: Content is protected !!