ಯಮಕಣಮರಡಿ : ವಂಟಮೂರಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ನಿಂಗಪ್ಪ ಹಾಗೂ ಕೆಂಪಣ್ಣ ಬಾಲದಂಡಿ ಅವರ ಗೃಹಪ್ರವೇಶದ ಕಾರ್ಯಕ್ರಮಕ್ಕೆ ರಾಹುಲ್ ಜಾರಕಿಹೊಳಿಯವರ ಭೇಟಿ.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ರಾಜ್ಯ ಯುವ ಪ್ರಧಾನ ಕಾರ್ಯದರ್ಶಿಗಳಾದ ರಾಹುಲ ಅಣ್ಣಾ ಜಾರಕಿಹೊಳಿ ಅವರು ಯಮಕನಮರಡಿ ಮತಕ್ಷೇತ್ರದಲ್ಲಿ ಬರುವ ಹಳ್ಳಿ ವಂಟಮೂರಿ ಗ್ರಾಮದ ಕಾಂಗ್ರೆಸ್ ಮುಖಂಡರಾದ ಕೆಂಪಣ್ಣ ಬಾಲದಂಡಿ ಹಾಗೂ ನಿಂಗಪ್ಪ ಬಾಲದಂಡಿ ಇವರ ನೂತನ ಗೃಹಪ್ರವೇಶ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಸಚಿವರ ಆಪ್ತ ಸಹಾಯಕರಾದ ಮಂಜುಗೌಡ ಪಾಟೀಲ್ ಲಗಮಣ್ಣ ಪನಗುದ್ದಿ ಬೆಳಗಾವಿ ಜಿಲ್ಲಾ ಗ್ರಾಮಿಣ ಅಧ್ಯಕ್ಷರಾದ ಬಾಳೇಶ ದಾಸನಹಟ್ಟಿ ಕೆ ಇ ಬಿ ಡೈರೆಕ್ಟರಾದ ಈರಪ್ಪ ಭಂಜೀರಾಮ್ ಕಾಂಗ್ರೆಸ್ ಮುಖಂಡರಾದ ಮಾರುತಿ ಕುದರಿ ಗಂಗರಾಮ ಇರಬಾಂವಿ ಬಸ್ಸು ಡುಮ್ಮ ನಾಯಿಕ ಭೀಮಶಿ ಪನಗುದ್ದಿ ನಿಂಗಪ್ಪ ಬಸರಗಿ ಸಂತೋಷ ಬಸರಗಿ ಊರಿನ ಹಿರಿಯರು ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ರಾಜು ಮುಂಡೆ