ರಾಯಚೂರು :– ರಿಮ್ಸ್ ಆಸ್ಪತ್ರೆಯಲ್ಲಿ ರಕ್ತಪರಿಕ್ಷ ಕೇಂದ್ರದಲ್ಲಿ ಸರಿಯಾದ ಸಿಬ್ಬಂದಿಗಳಿಲ್ಲದೆ ರಕ್ತವನ್ನು ಪರೀಕ್ಷೆ ಗೆ ತೆಗೆದುಕೊಂಡು ರಕ್ತ ನಿಧಿ ಲ್ಯಾಬಿನಲ್ಲಿ ಸರಿಯಾದ ಸಮಯಕ್ಕೆ ರಕ್ತ ಪರಿಶೀಲನೆ ಮಾಡಿದ ವರದಿಗಳನ್ನು ತಮ್ಮ ಕಂಪ್ಯೂಟರ್ನಲ್ಲಿ ಸರಿಯಾದ ಸಮಯಕ್ಕೆ ಎಂಟ್ರಿ ಮಾಡದೆ ಸಿಬ್ಬಂದಿಗಳಿಲ್ಲದೆ ಎರಡು ಮೂರು ದಿನಗಳಿಂದಲೂ ರಕ್ತ ಪರಿಶೀಲನ ವರದಿಗಳನ್ನು ನೀಡದೆ ಸುಮಾರು ಜಿಲ್ಲೆಯ ರಿನ್ಸ್ ಆಸ್ಪತ್ರೆಗೆ ನೂರರಿಂದ ನೂರಾಐವತ್ತು ಕಿಲೋ ಮೀಟರ್ ಗಳಿಂದ ರೋಗಿಗಳು ಬರುತ್ತಿದ್ದು ಸಂಬಂಧಪಟ್ಟ ರಾಯಚೂರು ರಿಮ್ಸ್ ಆಸ್ಪತ್ರೆ ಸೂಪ್ರೆಡೆಂಟ್ ಭಾಸ್ಕರ್ ಕೆ ಮೌನ ವಹಿಸಿದ್ದು ರೋಗಿಗಳು ಪರದಾಡುವಂತಹ ಪರಿಸ್ಥಿತಿ ಉಂಟಾಗಿದೆ
ಸಂಬಂಧಪಟ್ಟ ಮೇಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಸ್ಪತ್ರೆಯ ರೋಗಿಗಳು ಮಾಧ್ಯಮದ ಮುಖಾಂತರ ವಿನಂತಿಸಿಕೊಳ್ಳುತ್ತಿದ್ದಾರೆ ಈಗಲಾದರೂ ರಿಮ್ಸ್ ಆಸ್ಪತ್ರೆಯಲ್ಲಿ ರಕ್ತ ಭಂಡಾರ ನಿಧಿಯಲ್ಲಿ ಸಮಸ್ಯೆ ಬಗೆಹರಿಸಿ ಕೊಡುತ್ತಾರೋ ಇಲ್ಲವೋ ಅನ್ನೋದನ್ನ ಕಾದು ನೋಡಬೇಕಾಗಿದೆ
ವರದಿ:- ಗಾರಲದಿನ್ನಿ ವೀರನಗೌಡ