ಗೋಕಾಕ : ಟೀಕೆಟ್ ತೆಗೆದುಕೊಳ್ಳದೆ ರೈಲಿನಲ್ಲಿ ಪ್ರಯಾಣಿಸುತಿದ್ದ ಯುವಕನೊಬ್ಬ ಟಿಸಿಯವರಿಗೆ ಸಿಕ್ಕಿ ಹಾಕಿಕೊಳುತ್ತೇನೆಂದು ಹೆದರಿ ರೈಲಿನಿಂದ ಇಳಿಯಲು ಹೋಗಿ ಎರಡು ಕಾಲುಗಳನ್ನು ಕಳೆದುಕೊಂಡ ಘಟನೆ ಗೋಕಾಕ ತಾಲೂಕಿನ ಕೊಣ್ಣೂರಿನ ರೇಲ್ವೆ ನಿಲ್ದಾಣದಲ್ಲಿ ನಡೆದಿದೆ.
ನಿನ್ನೆ ದಿನ ಬೆಳಗಾವಿಯಲ್ಲಿ ಟಿಕೇಟ ಪಡೆಯದೆ ಹರಿಪ್ರಿಯಾ ಎಕ್ಸಪ್ರೇಸ್ ರೈಲಿನಲ್ಲಿ ಎರಿದ್ದಾನೆ, ಮುಂದಿನ ರೇಲ್ವೆ ನಿಲ್ದಾಣದ ಬರುವ ಹೊತ್ತಿಗೆ ಹೇಗಾದರೂ ಮಾಡಿ ಗೋಕಾಕ ರೋಡ ರೇಲ್ವೆ ನಿಲ್ದಾಣಕ್ಕೆ 12: 45 ಕ್ಕೆ
ಬರುತಿದ್ದಂತೆ ಇಳಿಯಬೇಕೆಂದು ವೇಗವಾಗಿ ಚಲಿಸುತ್ತಿರುವಾಗ ಇಳಿಯಲು ಹೋಗಿ ಚಕ್ರಗಳ ಮತ್ತು ಹಳಿಗಳ ಮದ್ಯೆ ಕಾಲುಗಳು ಸಿಕ್ಕ ಪರಿಣಾಮ ಎರಡು ಕಾಲು ಕತ್ತರಿಸಿ ಹೊಗಿವೆ,
ಇನ್ನು ಸ್ಥಳದಲ್ಲಿದ್ದ ರೇಲ್ವೆ ಇಲಾಖೆಯ ಸಿಬ್ಬಂದಿಗಳು ಆತನನ್ನು ಘಟಪ್ರಭಾ ರೇಲ್ವೆ ಕಚೇರಿಗೆ ಕಳುಹಿಸಿದರು, ಇನ್ನು ಯುವಕ ಗೋಕಾಕ ತಾಲೂಕಿನ ಶಿಂದಿಕುರುಬೇಟ ಗ್ರಾಮದವನೆಂದು ತಿಳಿದು ಬಂದಿದ್ದು ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆಂದು ತಿಳಿದು ಬಂದಿದೆ. ಇದರ ಜೊತೆಯಲ್ಲಿ ಕೇವಲ ಬೆಳಗಾವಿಂದ ಘಟಪ್ರಭಾ ವರೆಗೆ 50 ರೂ ,ಉಳಿಸಲು ಹೋಗಿ ಇಂತಹ ಪರಿಸ್ಥಿತಿ ತಂದುಕೊಂಡಿದ್ದು ಯಾಕೆ ಎಂದು ಜನ ಮಾತಾಡುತಿದ್ದಾರೆ..
ಮನೋಹರ ಮೇಗೇರಿ