ಹುಬ್ಬಳ್ಳಿ: ರೈಲ್ವೆ ಟಿಕೆಟ್ ದರವು ಕಿಮೀಗೆ ಒಂದು ಪೈಸೆ ಮಾತ್ರ ಹೆಚ್ಚಾಗಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ತಿಳಿಸಿದ್ದಾರೆ.
ಈ ಕುರಿತು ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಸ್ಥಳೀಯವಾಗಿ ಬಸ್ ಓಡಾಟಕ್ಕೆ ದರ ಹೆಚ್ಚಿದೆ, ಬಡವರಿಗೆ ಹೊರೆ ಆಗಬಾರದು, ಜನರ ಅಪೇಕ್ಷೆ ಮೇರೆಗೆ ಹೆಚ್ಚು ರೈಲು ಮತ್ತು ಸ್ವಚ್ಛತೆ ಬಗ್ಗೆ ಕೂಡ ಗಮನ ಹರಿಸಲಾಗುತ್ತಿದೆ.ರೈಲ್ವೆ ಟಿಕೆಟ್ ದರ ಹೆಚ್ಚೇನು ಏರಿಕೆ ಆಗಿಲ್ಲ. ಇದೀಗ ಕೇವಲ ಕಿ.ಮೀಗೆ ಒಂದು ಪೈಸೆ ಹೆಚ್ಚಾಗಿದೆ ಎಂದು ಹೇಳಿದರು.
ಇದನ್ನ ಪೊಲಿಟಿಕಲ್ ಟುಲ್ ಮಾಡಿಕೊಂಡು ಜನರ ಅಪೇಕ್ಷೆ ಮೇರೆಗೆ ಒಂದು ಪೈಸೆ ಹೆಚ್ಚು ಮಾಡಿದ್ದೇವೆ. ಎಲ್ಲ ಪ್ರಯಾಣಿಕರಿಗೆ ಸಬ್ಸಿಡಿ ಕೊಡಲಾಗುತ್ತಿದೆ. ಹುಬ್ಬಳ್ಳಿಯಿಂದ ಧಾರವಾಡಕ್ಕೆ ಹೋದರೆ 25 ಪೈಸೆ ಮಾತ್ರ ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದರು.




