Ad imageAd image

‘ಮಳೆ, ನದಿ ಪ್ರವಾಹ ಭೀತಿಗೆ ಮುಂಜಾಗ್ರತೆ ಕೈಗೊಳ್ಳಿ’

Bharath Vaibhav
‘ಮಳೆ, ನದಿ ಪ್ರವಾಹ ಭೀತಿಗೆ ಮುಂಜಾಗ್ರತೆ ಕೈಗೊಳ್ಳಿ’
WhatsApp Group Join Now
Telegram Group Join Now

—————————-ಅಧಿಕಾರಿಗಳಿಗೆ ಸಚಿವ ಡಾ. ಶರಣಪ್ರಕಾಶ ಪಾಟೀಲ ಸೂಚನೆ

ಸೇಡಂ: ಕಳೆದ ನಾಲ್ಕು ದಿನಗಳಿಂದ ಸುರಿದ ನಿರಂತರ ಮಳೆಗೆ ಸೇಡಂ ತಾಲೂಕಿನ ಗ್ರಾಮೀಣ ಭಾಗದಲ್ಲಿ ನದಿ ಪಾತ್ರದ ಹಳ್ಳಿಗಳಲ್ಲಿ ಕೆಲ ಮನೆಗಳಿಗೆ ನೀರು ನುಗ್ಗಿದ್ದ ಹಿನ್ನೆಲೆಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ವಿಡಿಯೋ ಕಾನ್ಫರೆನ್ಸ್ ಮೂಲಕ ತಾಲೂಡಾಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿ, ಗಂಜಿ ಕೇಂದ್ರ ಸ್ಥಾಪನೆ‌ ಸೇರಿದಂತೆ ಮುಂಜಾಗ್ರತೆ ಕ್ರಮ ವಹಿಸುವಂತೆ ಸೂಚಿಸಿದರು.

ತಾಲೂಕಿನ ಸಟಪಟನಳ್ಳಿ, ಸುರವಾರ, ಬಿಬ್ಬಳ್ಳಿ, ಸಂಗಾವಿ, ಮಳಖೇಡ, ಕರ್ಚಖೇಡ ಗ್ರಾಮಗಳಲ್ಲಿ ನದಿ ಪ್ರವಾಹದಿಂದ ಸಂಚಾರ ಸ್ಥಗಿತಗೊಂಡಿದ್ದು ವಿಎ ಹಾಗೂ ಪಿಡಿಓಗಳು ಸ್ಥಳದಲ್ಲಿ ಹಾಜರಿದ್ದು ತಾಲೂಕಾಡಳಿತಕ್ಕೆ ಮಾಹಿತಿ ರವಾನಿಸುವಂತೆ ಸಚಿವರು ತಿಳಿಸಿದರು.

ಹೆಚ್ಚಿನ ಮುಂಜಾಗ್ರತಾ ಸೂಚನೆಗಾಗಿ ಜಿಲ್ಲಾಡಳಿತ ನಿರಂತರ ಸಂಪರ್ಕದಲ್ಲಿದ್ದು, ಸಹಾಯಕ ಆಯುಕ್ತರು ಹಾಗೂ ತಹಶಿಲ್ದಾರರೊಡನೆ ಸಂವಹನ ನಡೆಸಿ ಯಾವುದೇ ಅಹಿತಕರ ಘಟನೆಯಾಗದಂತೆ ಎಚ್ವರಿಕೆ ವಹಿಸಿ ಎಂದು ಸೂಚಿಸಿದರು.

ಸೇಡಂ ನಗರದ ಇನ್ಫೋಸಿಸ್ ಕಾಲೋನಿಯಲ್ಲಿ ಮಳೆ ನೀರು ಸರಾಗವಾಗಿ ಸಾಗದೆ ಮನೆಗಳಿಗೆ ನೀರು ನುಗ್ಗಿರುವ ಮಾಹಿತಿಯೊಂದಿಗೆ ಪುರಸಭೆ ಆಡಳಿತ, ಅಧಿಕಾರಿಗಳು ಭೇಡಿ ನೀಡಿ ಅಲ್ಲಿನ ವ್ಯವಸ್ಥೆ ಸುಧಾರಿಸಲು ಯಶಸ್ವಿಯಾಗಿದ್ದಾರೆ. ಸಟಪಟನಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಚಿಂಚೋಳಿ-ಸೇಡಂ ಮಾರ್ಗ ಸ್ಥಗಿತಗೊಂಡಿದ್ದು, ವಿಡಿಯೋ ಕಾಲಿಂಗ್ ಮುಖಾಂತರ ವೀಕ್ಷಣೆ ಮಾಡಿ, ಜನರು ನೀರಿಗೆ ಇಳಿಯದಂತೆ ಎಚ್ಚರಿಕೆ ವಹಿಸಲು ಪೋಲಿಸರಿಗೆ ಹಾಗೂ ತಾಲೂಕಾಡಳಿತಕ್ಕೆ ಸಚಿವ ಡಾ.ಶರಣಪ್ರಕಾಶ ಪಾಟೀಲ ಸೂಚನೆ ನೀಡಿದರು.

ತಾಲೂಕಾಡಳಿತ ಕಾರ್ಯದೊಂದಿಗೆ ಪುರಸಭೆ ಅಧ್ಯಕ್ಷ ವೀರೇಂದ್ರ ರುದ್ನೂರ್ ಹಾಗೂ ಸೇಡಂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಪಂಚಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ ಭಾಗಿಯಾಗಿ ಪರಿಶೀಲನೆ ನಡೆಸಿದರು.

ವರದಿ: ವೆಂಕಟಪ್ಪ ಕೆ ಸುಗ್ಗಾಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!