ಚಂದನವನದ ಚಂದದ ಗೊಂಬೆ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ಬೀಚ್, ಬಾತ್‌ರೂಮ್, ಬೆಡ್‌ರೂಮ್ ಹೀಗೆ ಪ್ರತಿಯೊಂದು ಸ್ಥಳದಲ್ಲೂ ರೀಲ್ಸ್ ಮಾಡಿ ಹಂಚಿಕೊಳ್ಳುವ ನಿವೇದಿತಾ ತಮ್ಮ ದೇಹ ಸೌಂದರ್ಯವನ್ನು ತೋರಿಸಿಕೊಳ್ಳುತ್ತಾ ನೋಡುಗರ ಗಮನ ಸೆಳೆಯುತ್ತಿರುತ್ತಾರೆ. ಹೀಗೆ ಅವರೇನೇ ವಿಡಿಯೋ ಹಂಚಿಕೊಂಡರೂ ಕೂಡ ತಕ್ಷಣ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ. ಇದೀಗ ಮತ್ತೊಂದು ವಿಡಿಯೋವನ್ನು ಹಂಚಿಕೊಂಡಿದ್ದು ಮಳೆ, ಗುಡುಗು, ಮಿಂಚಿನಲ್ಲಿ ಮೈನೆನೆದು ಪಡ್ಡೆಹುಡುಗರ ಮನ ಕದ್ದಿದ್ದಾರೆ ಚಂದದ ಗೊಂಬೆ ನಿವೇದಿತಾ.
ಹೌದು ಗಾಯಕಿ ಶ್ರೇಯಾ ಘೋಷಲ್ ಹಾಡಿರುವ ‘ಓ ಬೇಕಬರ್’ ಹಿಂದಿ ಹಾಡಿಗೆ ನಿವೇದಿತಾ ಗೌಡ ರೀಲ್ಸ್ ಮಾಡಿದ್ದಾರೆ. ನಿವೇದಿತಾ ಹಿಂಬದಿಯಲ್ಲಿ ಕಪ್ಪು ಮೋಡ, ಮಳೆ, ಗುಡುಗು, ಮಿಂಚು ಕಾಣಿಸುತ್ತದೆ. ಮುಖ್ಯ ರಸ್ತೆಯ ಮನೆ ಅಂಗಳದ ಕಾಂಪೌಂಡ್ ಒಳಗಡೆ ನಿವೇದಿತಾ ಗೌಡ ವಿಡಿಯೋಕ್ಕೆ ಡಿಫ್ರೆಂಟ್ ಫೋಸ್ ಕೊಟ್ಟಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಈ ವಿಡಿಯೋಕ್ಕೆ ವಿಭಿನ್ನ ರೀತಿಯ ಕಾಮೆಂಟ್‌ಗಳು ಬಂದಿವೆ. ನೆಟ್ಟಿಗರೊಬ್ಬರು ಹಾಸ್ಯಾಸ್ಪದವಾಗಿ ಕಾಮೆಂಟ್ ಮಾಡಿದ್ದಾರೆ. “ಮೊದಲು ರಾಜರು ಡ್ಯಾನ್ಸ್ ನೋಡಲು ಆಸ್ತಿ, ದುಡ್ಡು ಎಲ್ಲವನ್ನೂ ಖರ್ಚು ಮಾಡ್ತಿದ್ದರು; ನಾವು ಈಗ ಡೇಟಾ ರೀಚಾರ್ಜ್ ಮಾಡಿದರೆ ಸಾಕು!” ಎಂದು ಬರೆದುಕೊಂಡಿದ್ದಾರೆ. ಇನ್ನೂ ಕೆಲವರು ವಿಡಿಯೋವನ್ನು ಮೆಚ್ಚಿಕೊಂಡರೆ ಇನ್ನೂ ಕೆಲವರು ನಿಂದಿಸಿದ್ದಾರೆ.
ಅಂದಹಾಗೆ ನಿವೇದಿತಾ ಸಿನಿಮಾ ಅಥವಾ ಧಾರಾವಾಹಿ ರಂಗದಿಂದ ಬಂದವರಲ್ಲ. ಬಿಗ್‌ಬಾಸ್ ಮನೆಗೆ ಬಂದಾಗಲೇ ಇವರ ಮಾತು, ಕೇಶರಾಶಿ, ಗೊಂಬೆಯಂತಹ ಮೈಕಟ್ಟು ಕಂಡು ಜನ ಫಿದಾ ಆಗಿದ್ದು. ನಿವೇದಿತಾ ಗೌಡ ಯಾರು ಅನ್ನೋದನ್ನ ಜನ ಹುಡುಕಲು ಆರಂಭಿಸಿದ್ದು ಆಗಿನಿಂದಲೇ. ಹೀಗೆ ಬಿಗ್‌ಬಾಸ್ ಮನೆಯಲ್ಲಿ ಅದೆಷ್ಟು ಫೇಮಸ್ ಆಗಿದ್ದರು ಅಂದರೆ ನಿವೇದಿತಾ ಮಾತನಾಡುವ ರೀತಿಯಲ್ಲಿ ಮಾತನಾಡಿ ಜನ ರೀಲ್ಸ್ ಮಾಡಲು ಶುರು ಮಾಡಿದ್ದರು.