Ad imageAd image

ಮಳೆ ಹಾನಿ: ಚಿಕ್ಕಮಂಗಳೂರು ಜಿಲ್ಲೆಯ ಪ್ರದೇಶಗಳಿಗೆ ಸಚಿವ ಸತೀಶ ಜಾರಕಿಹೊಳಿ ಭೇಟಿ ಪರಿಶೀಲನೆ

Bharath Vaibhav
ಮಳೆ ಹಾನಿ:  ಚಿಕ್ಕಮಂಗಳೂರು ಜಿಲ್ಲೆಯ ಪ್ರದೇಶಗಳಿಗೆ ಸಚಿವ ಸತೀಶ ಜಾರಕಿಹೊಳಿ ಭೇಟಿ ಪರಿಶೀಲನೆ
WhatsApp Group Join Now
Telegram Group Join Now

ಚಿಕ್ಕಮಂಗಳೂರು :ಕರ್ನಾಟಕ ಸರ್ಕಾರ ಲೋಕೋಪಯೋಗಿ ಇಲಾಖೆ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ, ಸನ್ಮಾನ್ಯ ಶ್ರೀ ಸತೀಶ್ ಅಣ್ಣಾ ಜಾರಕಿಹೊಳಿ ಅವರು ಮಳೆಯಿಂದ ಹಾನಿಯಾದ ಚಿಕ್ಕಮoಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಅಲ್ದುರ್ ನಿಂದ ವಾಡರ್ ರಸ್ತೆಯನ್ನು ಇಂದು ಪರಿಶೀಲಿಸಲಾಯಿತು ಈ ವೇಳೆ 13 ಕಿ.ಮೀ.‌ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಯೋಜನೆ ರೂಪಿಸಲು ಅಧಿಕಾರಿಗಳಿಗೆ ತಿಳಿಸಿದರು.

 

ಚಿಕ್ಕಮoಗಳೂರು ಜಿಲ್ಲೆಯ ಚಂಡಗೋಡು ಗ್ರಾಮದ ಅಂಗನವಾಡಿ ಕೇಂದ್ರಕ್ಕೆ ಭೇಟಿ‌ ನೀಡಿ, ಪರಿಶೀಲಿಸಿದರು,
ಚಿಕ್ಕಮಗಳೂರಿನ ನಿರೀಕ್ಷಣಾ ನಿಲಯಕ್ಕೆ ಇಂದು ಭೇಟಿ‌ ನೀಡಿ,‌ ಕಾಮಗಾರಿಯನ್ನು ಪರಿಶೀಲಿಸಿದರು.

ಈ ವೇಳೆ ಸ್ಥಳೀಯ ‌ಮುಖಂಡರು‌ ಮತ್ತು ಕಾರ್ಯಕರ್ತರನ್ನು ಭೇಟಿಯಾಗಿ ಅವರ ಅಹವಾಲು ಆಲಿಸಿದರು.

ಹಾಸನ ಜಿಲ್ಲೆಯ ಬೇಲೂರು ಪಟ್ಟಣಕ್ಕೆ ಇಂದು ಆಗಮಿಸಿದ ಸಂದರ್ಭದಲ್ಲಿ ಇಲ್ಲಿನ ಆಡಳಿತ ಸೌಧದಲ್ಲಿರುವ ಡಾ. ಬಿ.ಆರ್.‌ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನಗಳನ್ನು ಸಲ್ಲಿಸಿದರು.

ಹಾರ್ಟ್ ಲ್ಯಾಂಪ್’ (ಎದೆಯ ಹಣತೆ) ಕೃತಿಗೆ 2025 ರ ಸಾಲಿನ ಪ್ರತಿಷ್ಠಿತ ಬೂಕರ್‌ ಪ್ರಶಸ್ತಿ ಪಡೆದ ಸಾಹಿತಿ ಬಾನು ಮುಷ್ತಾಕ್ ಅವರನ್ನು ಇಂದು ಹಾಸನ ನಗರದ ಅವರ ಮನೆಯಲ್ಲಿ ಭೇಟಿಯಾಗಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಎಚ್.ಕೆ.ಸುರೇಶ ಶಾಸಕರಾದ ಶ್ರೀ ಎಚ್.ಡಿ. ತಮ್ಮಯ್ಯ, ಶ್ರೀ ಟಿ.ಡಿ. ರಾಜೇಗೌಡ, ನಯನಾ ಮೊಟಮ್ಮ ಅವರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!