Ad imageAd image

ಗ್ರಾಮೀಣ ಜನರ ಬದುಕು ಕಟ್ಟಿಕೊಡುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಮಾಡುತ್ತಿದೆ: ರಾಜಣ್ಣ ಕೊರವಿ

Bharath Vaibhav
ಗ್ರಾಮೀಣ ಜನರ ಬದುಕು ಕಟ್ಟಿಕೊಡುವಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕೆಲಸ ಮಾಡುತ್ತಿದೆ: ರಾಜಣ್ಣ ಕೊರವಿ
WhatsApp Group Join Now
Telegram Group Join Now

ಕಲಘಟಗಿ :-ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಧಾರವಾಡ ಜಿಲ್ಲೆಯ ಅಖಿಲ ಕರ್ನಾಟಕ ಜಿಲ್ಲಾ ಜನಜಾಗೃತಿ ವೇದಿಕೆ ಟ್ರಸ್ಟ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಲಾಗಿದ್ದ ಗಾಂಧಿಸ್ಮೃತಿ, ಬೃಹತ್ ಜಾಥಾ ಹಾಗೂ ವ್ಯಸನಮುಕ್ತ ಸಾಧಕರ ಸಮಾವೇಶ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿ ಅವರು ಕಂಡ ಗ್ರಾಮಸ್ವರಾಜ್ಯ ಕನಸು ನನಸಾಗಿಸುವ ನಿಟ್ಟನಿಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಹಲವು ಯೋಜನೆ ಜಾರಿಗೆ ತಂದಿದ್ದಾರೆ. ರೈತರು, ಮಹಿಳಾ ಸಬಲೀಕರಣ, ವಿದ್ಯಾರ್ಥಿ ವೇತನ, ದೇವಸ್ಥಾನಗಳ ಜೀರ್ಣೋದ್ಧಾರ ಮಾಡಲು ಮುಂದಾಗಿದ್ದಾರೆ. ಮದ್ಯ ವರ್ಜನ ಶಿಬಿರ ನಡೆಸುವ ಮೂಲಕ ಬಡವರ ಮನೆಗಳನ್ನು ಬೆಳಗಿಸಿದ್ದಾರೆ ಎಂದರು.

ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತರು, ಜನಜಾಗೃತಿ ವೇದಿಕೆ ಟ್ರಸ್ಟ್ ಜಿಲ್ಲಾಧ್ಯಕ್ಷ ಸಂತೋಷ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮದ್ಯಪಾನ ಕೇವಲ ಒಬ್ಬನ ಪ್ರಾಣ ತೆಗೆಯುವುದಿಲ್ಲ ಬದಲಿಗೆ ಇಡೀ ಕುಟುಂಬದ ಸರ್ವನಾಶಕ್ಕೆ ಕಾರಣ ಆಗುತ್ತದೆ. ಪ್ರತಿಯೊಬ್ಬರು ಗಾಂಧೀಜಿಯವರ ಆಶಯದಂತೆ ಮದ್ಯಪಾನ ಮುಕ್ತ ಸಮಾಜ ನಿರ್ಮಾಣಕ್ಕೆ ಪಣತೊಡಬೇಕು ಎಂದರು.
ಪಟ್ಟಣದ ಯುವಶಕ್ತಿ ಸರ್ಕಲ್ನಲ್ಲಿ ದುಶ್ಚಟ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಆಗ್ರಹಿಸಲು ಆಯೋಜಿಸಿದ್ದ ಬೃಹತ್ ಜಾಥಾಕ್ಕೆ ಹಿರಿಯ ನ್ಯಾಯಾಧೀಶ ರವೀಂದ್ರ ಹೊನೋಲೆ ಹಾಗೂ ಕಿರಿಯ ದಿವಾಣಿ ನ್ಯಾಯಾಧೀಶ ಎನ್. ಗಣೇಶ ಚಾಲನೆ ನೀಡಿದರು.

ಜಾಥಾ ಬಾಲಮಾರುತಿ ಮಂದಿರದ ಮೂಲಕ ರಾಷ್ಟ್ರೀಯ ಹೆದ್ದಾರಿ, ಬೆಂಡಿಗೇರಿ ಓಣಿ ಮಾರ್ಗವಾಗಿ ಚೌತಮನಿ ಕಟ್ಟೆಯಿಂದ ಬಸವೇಶ್ವರ ಕಲ್ಯಾಣ ಮಂಟಪ ತಲುಪಲಿತು. ಜಾಥಾದಲ್ಲಿ ಸಿದ್ಧಿ ಬುಡಕ್ಕಟ್ಟು ಜನಾಂಗದ ಜನಪದ ಪ್ರದರ್ಶನ, ಲಂಬಾಣಿ ನೃತ್ಯ, ಯಕ್ಷಗಾನ ಸೇರಿದಂತೆ ವಿವಿಧ ಛದ್ಮವೇಶಧಾರಿ ಮಕ್ಕಳು ಗಮನ ಸೆಳೆದರು.
ತಹಶೀಲ್ದಾರ್ ವೀರೇಶ ಮುಳಗುಂದಮಠ ಉದ್ಘಾಟಿಸಿದರು.

ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕಿ ದಯಾಶೀಲ, ಸವಿತಾ ಅಮರಶೆಟ್ಟಿ, ಜ.ಜಾ.ವೇದಿಕೆ ಉಪಾಧ್ಯಕ್ಷ ಪ್ರಭಾಕರ ನಾಯಕ, ಜಿಲ್ಲಾ ನಿರ್ದೇಶಕ ಪ್ರದೀಪ ಶೆಟ್ಟಿ, ನಿವೃತ್ತ ಪತ್ರಾಂಕಿತ ಅಧಿಕಾರಿ ಎಂ.ಆರ್. ತೋಟಗಂಟಿ, ಬಸವೇಶ್ವರ ಕಲ್ಯಾಣ ಮಂಟಪದ ಆಡಳಿತ ಮಂಡಳಿ ಸದಸ್ಯ ಗಂಗಾಧರ ಗೌಳಿ, ತಾಲೂಕು ಯೋಜನಾಧಿಕಾರಿ ಪ್ರಶಾಂತ ನಾಯ್ಕ, ರೇಖಾ ಕಲಘಟಗಿ, ಎ.ವಿ. ಜಯರಾಮನವರ, ಎಂ.ಟಿ. ಉಪಾಧ್ಯಾಯ, ಸುರೇಶ ಮರಲಿಂಗಣ್ಣವರ, ಮಾರುತಿ ಶೆಟ್, ಧನಪಾಲ ಬೆಟದೂರು ಇತರರಿದ್ದರು.

ವರದಿ : ಶಶಿಕುಮಾರ ಕಲಘಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!