ಗುವಾಹತಿ: ಎಡಗೈ ಬ್ಯಾಟುಗಾರ ಕುಂಟನ್ ಡೆಕಾಕ್ ಅವರ ಮಿಂಚಿನ ಆಟದ ಸಹಾಯದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಪಂದ್ಯಾವಳಿಯಲ್ಲಿ ರಾಜಸ್ತಾನ ರಾಯಲ್ಸ್ ಎದುರು 8 ವಿಕೆಟ್ ಗಳ ಭರ್ಜರಿ ಜಯ ಪಡೆಯಿತು.
ಇಲ್ಲಿನ ಬರ್ಸಾಪರಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ತಾನ ರಾಯಲ್ಸ್ ತಂಡ ನಿಗದಿತ 20 ಓವರುಗಳಲ್ಲಿ 9 ವಿಕೆಟ್ ಗೆ 151 ರನ್ ಗಳಿಸಿತು. ಪ್ರತಿಯಾಗಿ ಆಡಿದ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ 17.3 ಓವರುಗಳಲ್ಲಿ 2 ವಿಕೆಟ್ ಗೆ 153 ರನ್ ಗಳಿಸಿ ಜಯಭೇರಿ ಬಾರಿಸಿತು.
ಸ್ಕೋರ್ ವಿವರ
ರಾಜಸ್ತಾನ ರಾಯಲ್ಸ್ 20 ಓವರುಗಳಲ್ಲಿ 9 ವಿಕೆಟ್ ಗೆ 151
ದ್ರುವ್ ಜುರೆಲ್ 33, 28 ಎಸೆತ, 5 ಬೌಂಡರಿ, ಜೈಸ್ವಾಲ್ 29, 24 ಎಸೆತ, 2 ಬೌಂಡರಿ, 2 ಸಿಕ್ಸರ್,
ರಿಯಾನ್ ಪರಾಗ್ 25, 15 ಎಸೆತ, 3 ಬೌಂಡರಿ, ವರುಣ ಚರ್ಕವರ್ತಿ 17 ಕ್ಕೆ 2)
ಕೋಲ್ಕತ್ತಾ ನೈಟ್ ರೈಡರ್ಸ್ 17.3 ಓವರುಗಳಲ್ಲಿ 2 ವಿಕೆಟ್ ಗೆ 153
ಕುಂಟನ್ ಡೆಕಾಕ್ ಅಜೇಯ 97, 61 ಎಸೆತ, 8 ಬೌಂಡರಿ, 6 ಸಿಕ್ಸರ್
ವಾನಿಂದು ಹಸರಂಗ 34 ಕ್ಕೆ 1: ಪಂದ್ಯ ಶ್ರೇಷ್ಠ: ಕುಂಟನ್ ಡೆಕಾಕ್