ಐಪಿಎಲ್ನ 42ನೇ ಪಂದ್ಯದಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತಮ್ಮ ತವರು ಮೈದಾನ ಚಿನ್ನಸ್ವಾಮಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಕಳೆದ ಪಂದ್ಯದಲ್ಲಿ ಅವರದ್ದೇ ನೆಲದಲ್ಲಿ ರಾಜಸ್ಥಾನವನ್ನು ಬಗ್ಗುಬಡಿದಿದ್ದ ಬೆಂಗಳೂರು ಪಡೆ ಇದೀಗ ತವರು ನೆಲದಲ್ಲಿ ಗೆಲ್ಲುವ ವಿಶ್ವಾಸದಲ್ಲಿದೆ.
ಈ ಋತುವಿನಲ್ಲಿ ಉತ್ತಮ ಫಾರ್ಮ್ನಲ್ಲಿರುವ ಬೆಂಗಳೂರು ತಂಡ ಈ ವರೆಗೂ ಆಡಿರುವ 8 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದುಕೊಂಡಿದ್ದು 3ರಲ್ಲಿ ಸೋಲನ್ನು ಕಂಡಿದೆ. ಕಳೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿತ್ತು.
ರಾಜಸ್ಥಾನ ರಾಯಲ್ಸ್ ತಂಡ ಕಳಪೆ ಫಾರ್ಮ್ನಿಂದಾಗಿ ಕಂಗೆಟ್ಟಿದೆ. ಈವರೆಗೂ ಆಡಿರುವ 8 ಪಂದ್ಯಗಳ ಪೈಕಿ 2ರಲ್ಲಿ ಗೆದ್ದು 6 ಪಂದ್ಯಗಳಲ್ಲಿ ಸೋಲನ್ನು ಕಂಡಿದೆ. ಪ್ಲೇ ಆಫ್ ಹಾದಿ ಕೂಡ ಕಠಿಣವಾಗಿದೆ. ಉಳಿದಿರುವ ಎಲ್ಲಾ ಪಂದ್ಯಗಳನ್ನು ಗೆಲ್ಲಲೇ ಬೇಕಾಗಿದ್ದು ಒಂದೇ ಪಂದ್ಯವನ್ನು ಕಳೆದುಕೊಂಡರು ಬೇರೆ ತಂಡದ ಫಲಿತಾಂಶದ ಮೇಲೆ ಆಧಾರವಾಗಬೇಕಾಗುತ್ತದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ ರಾಯಲ್ಸ್ ತಂಡಗಳು ಈವರೆಗೂ ಐಪಿಎಲ್ನಲ್ಲಿ 33 ಪಂದ್ಯಗಳನ್ನು ಆಡಿವೆ. ಇದರಲ್ಲಿ ಆರ್ಸಿಬೆ ಮೇಲುಗೈ ಸಾಧಿಸಿದೆ. ರಾಜಸ್ಥಾನ ವಿರುದ್ಧ 16 ಬಾರಿ ಗೆಲುವು ಸಾಧಿಸಿದ್ದರೆ, ಆರ್ಸಿವಿ ವಿರುದ್ಧ ಆರ್ಆರ್ 14 ಬಾರಿ ಜಯಭೇರಿ ಬಾರಿಸಿದೆ. ಮೂರು ಪಂದ್ಯಗಳು ರದ್ದುಗೊಂಡಿವೆ.