ಅಥಣಿ : ಪರಿಶಿಷ್ಠ ಜಾತಿಯಲ್ಲಿ ಒಳಮೀಸಲಾತಿ ನೀಡಲು ಆಯಾ ರಾಜ್ಯ ಸರ್ಕಾರಕ್ಕೆ ಅಧಿಕಾರ ಇದೆ ಎಂದು ಸುರ್ಪಿಂ ಕೋರ್ಟ ಆದೇಶದ ಹಿನ್ನಲೇಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಒಳಮೀಸಲಾತಿ ಸಲ್ಪಿಸಲು ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗ ರಚಿಸಿದೆ.
ಆಯೋಗವು ಪರಿಶಿಷ್ಥ ಜಾತಿಯಲ್ಲಿನ ನಿಕರವಾದ ಅಕ್ಕಿ ಸಂಖ್ಯೆ ದತ್ತಾಂಶ ಸಂಗ್ರಹಿಸಲು ೦೫-೦೫-೨೦೨೫ ರಿಂದ ೧೭-೦೫-೨೦೨೫ ವರಿಗೆ ಮನೆ ಮನೆಗೆ ಭೇಟಿ ನೀಡುವುದು ಮತ್ತು ೧೯-೦೫-೨೦೨೫ ರಿಂದ ೨೧-೦೫-೨೦೨೫ ವರಿಗೆ ವಿಷೇಶ ಶಿಬಿರಗಳು. ಹಾಗೂ ೧೯-೦೫-೨೦೨೫ ರಿಂದ ೨೩-೦೫-೨೦೨೫ ವರಿಗೆ ಸ್ವಯಂ ಘೋಷಣೆ ಆನಲೈನ್ ಮೂಲಕ ಜಾತಿಗಣತಿ ನಡೆಯಲ್ಲಿದ್ದು ಈ ಸಂಧರ್ಭದಲ್ಲಿ ಬೆಳಗಾವಿ ಜಿಲ್ಲೆಯ ಮಾದಿಗ ಸಮುದಾಯದವರು ತಮ್ಮ ಮೂಲ ಜಾತಿ ಕಾಲಂ 61 ನಂತೆ ಮಾದಿಗ ಎಂದು ಬರಿಸಬೇಕು ಎಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಚ ರಾಜೇಂದ್ರ ಐಹೊಳೆ ಅವರು ಕೂಕಟನೂರ ಪ್ರವಾಸಿ ಮಂದಿರದಲ್ಲಿ ಪತ್ರಿಕಾ ಗೋಷ್ಥಿ ಉದ್ದೇಶಿ ಮಾತನಾಡಿ ಹೇಳಿದರು.
ನಂತರ ಮಾಜಿ ಅಥಣಿ ಪುರಸಭೆ ಅದ್ಯಕ್ಷ ಹಾಲಿ ಸದಸ್ಯ ರಾವಸಾಬ ಐಹೊಳೆ ಅವರು ಮಾತನಾಡಿ ಮಾದಿಗ ಸಮುದಾಯದ ಮೂರು ದಶಕದ ಹೋರಾಟಕ್ಕೆ ಮೂರು ಸರ್ಕಾರಗಳು ನಮಗೆ ನ್ಯಾಯ ನೀಡಲಿಲ್ಲಿ ಕೊನೆಗೆ ಸುರ್ಪಿಂ ಕೋರ್ಟದಿಂದ ನ್ಯಾಯ ಸಿಕ್ಕಿದೆ ಪ್ರತಿ ಹಳ್ಳಿಗಳಲ್ಲಿ ನಮ್ಮ ಸಮುದಾಯಕ್ಕೆ ಜಾಗೃತಿ ಮೂಡಿಸಿ ಸಮಿಕ್ಷೇ ಸಂದರ್ಭದಲ್ಲಿ ನಮ್ಮ ಕಾಗದ ಪತ್ರದಲ್ಲಿ ಏನೇ ಇರಲಿ ಒಳ ಜಾತಿ ಎಂದು ಬಂದಲ್ಲಿ ಮಾದಿಗ ಎಂದು ಬರಿಸಬೇಕು ಎಂದು ತಿಳಿಸಿದರು.
ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಥಣಿ ತಾಲೂಕ ಮಹಿಳಾ ಘಟಕದ ಅಧ್ಯಕ್ಷೆ ಸುನೀತಾ ಐಹೋಳೆ ಮಾತನಾಡಿ ಇದಿನಿಂದ ನಡೆಯುವ ಪರಿಶಿಷ್ಠ ಜಾತಿಗಣತಿಯಲ್ಲಿ ನಮ್ಮ ಮಾದಿಗ ಸಮುದಾಯದ ವಿದ್ಯಾವಂತ ಯುವಕರು ಗಣತಿಗೆ ಬಂದ ಶಿಕಕ್ಷರಿಗೆ ಸಹಕಾರ ನೀಡಿ ಪ್ರತಿ ಒಂದು ಮನೆಗೆ ಹೋಗಿ ಸರಿದಾದ ಮಾಹಿತಿ ನೀಡಬೇಕು ಹಾಗೂ ಕೂಲಿಗೆ ಎಂದು ಹೂರರಾಜ್ಯಕ್ಕೆ ಹೋಗಿದ್ದವರನ್ನು ಕರಿಯಿಸಿ ಜಾತಿಗಣತಿಯಲ್ಲಿ ಸೇರಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮಾಜಿ ಅಧ್ಯಕ್ಷ ಸಂಗಪ್ಪ ಮಾಯನಟ್ಟಿ ರಾಜು ರಾಜೀಂಗಳೆ ಆನಂದ ಮಾದರ ಪರುಶುರಾಮ ಮಾದರ ಆಕಾಶ ಮಾದರ ಮಾರುತಿ ಸಂಗಮ ನಾಗೇಶ ಐಹೊಳೆ ಶನ್ಮೂಕ ಮನಗಿಣಿ ಸಂತೋಷ್ಯ ಹಾದಿಮನಿ ಮುಂತಾದಚರು ಉಪಸಿಥ್ಥಿ ಇದ್ದುರು ಮಾದಿಗ ಮೀಸಲಾತಿ ಹೋರಾಟ ಸಮಿತಿ ಅಥಣಿ ತಾಲೂಕ ಅಧ್ಯಕ್ಷರು ಹಣಮಂತ ಅರ್ದವೂರ ಸ್ವಾಗತಿಸಿದರು ರಾಜ್ಯ ಕಮಿಟಿ ಸದಸ್ಯರಾದ ಕುಮಾರ ಗಸ್ತಿ ಅವರು ವಂದಿಸಿದರು.