ರಾಮದುರ್ಗ: ಹೃದಯಾಘಾತಕ್ಕೆ ಎಣ್ಣೆ ಪದಾರ್ಥಗಳ ಸೇವನೆ ಕಾರಣ, ಅದರಿಂದ ದೂರವಿದ್ದರೆ ಹೃದಯಾಘಾತವನ್ನು ತಪ್ಪಿಸಬಹುದು ಎಂದು ಸುರೇಬಾನ-ಶಿವಪೇಠ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ರಾಜೇಂದ್ರ ಕಿಲಬನೂರ ಹೇಳಿದರು.
ಅವರು ತಾಲೂಕಿನ ಶಿವಪೇಠ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪೋಷಣಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಸಮಯಕ್ಕೆ ಸರಿಯಾಗಿ, ಪದಾರ್ಥಗಳನ್ನು ಸೇವನೆ ಮಾಡುದುದರಿಂದ ನಮ್ಮ ದೇಹವನ್ನು ಆರೋಗ್ಯವಾಗಿಡಲು ಸಹಾಯವಾಗುತ್ತಿದೆ. ಇದಕ್ಕೆಲ್ಲದಕ್ಕೂ ಮೋದಲು ನಾವು ನಮ್ಮ ಸುತ್ತಮುತ್ತಲಿನ ಪರಿಸರ ಹಾಗೂ ಕೈಗಳನ್ನು ಸ್ವಚ್ಛ ಇಡುವುದರಿಂದ ನಮ್ಮ ಆರೋಗ್ಯಕ್ಕೆ ಹಾನಿ ಆಗುವುದಿಲ್ಲ ಎಂದು ಹೇಳಿದ ಅವರು, ಪೋಷಣಾ ಅಭಿಯಾನವನ್ನು ಸರಕಾರ ಮೊದಲು ಅಂಗನವಾಡಿಯಲ್ಲಿ ಮಾತ್ರ ಕಡ್ಡಾಯಗೊಳಿಸಿತ್ತು, ಆದರೆ ಈಗ ಪ್ರಾಥಮಿಕ ಶಾಲೆಯಲ್ಲಿಯು ಪ್ರಾರಂಭಿಸಿರುವುದು ಶ್ಲಾಘನೀಯ ಎಂದು ಹರ್ಷ ವ್ಯಕ್ತಪಡಿಸಿದರು.

ಪತ್ರಕರ್ತರಾದ ಎಸ್ ಆರ್ ಗುರುಬಸಣ್ಣವರ ಮಾತನಾಡಿ, ವೈದ್ಯಾಧಿಕಾಗಳ ಮಾರ್ಗದರ್ಶನದಲ್ಲಿ ನಡೆದದ್ದೇ ಆದರೆ ನಮಗೆ ಯಾವುದೇ ತರಹದ ರೋಗ ರುಜಿನಿಗಳು ಬರುವುದಿಲ್ಲ ನಾವು ಅದನ್ನು ಪಾಲಿಸೋಣ ಎಂದು ಕರೆ ನೀಡಿದರು.
ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳ ಮನ ಮುಟ್ಟಿಸುವಂತಹ ವಿವಿಧ ರೀತಿಯ ದವಸ-ಧಾನ್ಯಗಳನ್ನು ಹಾಗೂ ವಿವಿಧ ರೀತಿಯ ತರಕಾರಿಗಳನ್ನು ಇಡಲಾಗಿತ್ತು. ಮಕ್ಕಳಿಗೆ ನೆಣೆಸಿ ಕಾಳುಗಳನ್ನು ಸಹ ಸೇವನೆಗೆ ನೀಡಲಾಯಿತು.
ವೇದಿಕೆಯ ಮೇಲೆ ಎಸ್ಡಿಎಂಸಿ ಅಧ್ಯಕ್ಷ ಬಸಪ್ಪ ಬೇವಿನಮರದ, ಉಪಾಧ್ಯಕ್ಷೆ ತಳವಾರ ಇದ್ದರು.
ಸಂತೋಷ ಕೊರಿ ಶಿಕ್ಷಕರು ಸ್ವಾಗತಿಸಿ, ನಿರೂಪಿಸಿದರು. ಪ್ರ.ಮುಖ್ಯೋಪಾಧ್ಯಾಯರಾದ ಆತ್ಮಾನಂದ ಪಲ್ಲೇದ ವಂದಿಸಿದರು.
ವರದಿ: ಕುಮಾರ ಎಂ.




