ಚಿಕ್ಕಬಳ್ಳಾಪುರ: ನ್ಯಾಯಾಂಗ ಬಂಧನದಲ್ಲಿದ್ದ ಕಾಂಗ್ರೆಸ್ ಮುಖಂಡ ರಾಜೀವ ಗೌಡ ಅವರಿಗೆ ಶಿಡ್ಲಘಟ್ಟ ಜೆ.ಎಂ.ಎಫ್‌ಸಿ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ.
ಶಿಡ್ಲಘಟ್ಟ ನಗರಸಭೆ ಪೌರಾಯುಕ್ತೆಗೆ ಧಮ್ಕಿ ಹಾಕಿದ ಪ್ರಕರಣದಲ್ಲಿ ರಾಜೀವಗೌಡ ಅವರನ್ನು ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿತ್ತು. ಆ. ೨೮ ರಂದು ಜಾಮೀನು ರ‍್ಜಿಯ ವಿಚಾರಣೆ ನಡೆದು ೩೦ ರವರೆಗೆ ಆದೇಶವನ್ನು ಕಾಯ್ದಿರಿಸಲಾಗಿತ್ತು. ಇಂದು ನ್ಯಾಯಾಲಯದ ಆದೇಶ ಬಂದಿದ್ದು, ರಾಜೀವ ಗೌಡ ಅವರಿಗೆ ಜಾಮೀನು ಸಿಕ್ಕಿದೆ.
ರಾಜೀವ ಗೌಡ ಅವರಿಗೆ ಜಾಮೀನು ಮಂಜೂರು




