ಬೆಂಗಳೂರು: 2020- 21ನೇ ಸಾಲಿನ ಡಾ. ರಾಜಕುಮಾರ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಅದೇ ರೀತಿ ಪುಟ್ಟಣ್ಣ ಕಣಗಾಲ್, ವಿಷ್ಣುವರ್ಧನ್ ಪ್ರಶಸ್ತಿಯನ್ನು ಕೂಡ ಘೋಷಣೆ ಮಾಡಲಾಗಿದೆ.
ನಟಿ ಜಯಮಾಲಾ ಅವರಿಗೆ 2020ನೇ ಸಾಲಿನ ಡಾ. ರಾಜಕುಮಾರ್ ಪ್ರಶಸ್ತಿ ನೀಡಲಾಗಿದೆ. ಎಂಎಸ್ ಸತ್ಯು ಅವರಿಗೆ 2020ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಯನ್ನು ನೀಡಲಾಗಿದೆ.
ಪ್ರಗತಿ ಅಶ್ವತ್ಥ್ ನಾರಾಯಣ ಅವರಿಗೆ ಡಾ. ವಿಷ್ಣುವರ್ಧನ್ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಜೀವಮಾನ ಸಾಧನೆಗಾಗಿ ರಾಜ್ಯ ಸರ್ಕಾರ ಪ್ರಶಸ್ತಿ ಘೋಷಣೆ ಮಾಡಿದೆ.
ಸಾ.ರಾ. ಗೋವಿಂದು ಅವರಿಗೆ 2021ನೇ ಸಾಲಿನ ಡಾ. ರಾಜಕುಮಾರ್ ಪ್ರಶಸ್ತಿಯನ್ನು ನೀಡಲಾಗಿದೆ, ನಿರ್ದೇಶಕ ಶಿವರುದ್ರಯ್ಯ ಅವರಿಗೆ ಪುಟ್ಟಣ ಕಣಗಾಲ್ ಪ್ರಶಸ್ತಿ ಮತ್ತು ಹಿರಿಯ ನಟ ಎಂ.ಕೆ. ಸುಂದರರಾಜ್ ಅವರಿಗೆ ಡಾ. ವಿಷ್ಣು ವರ್ಧನ್ ಪ್ರಶಸ್ತಿ ನೀಡಲಾಗಿದೆ.




