ಬೆಳಗಾವಿ: ಎಂಇಎಸ್ ಪುಂಡರ ಮಾತು ಕೇಳಿ ಕನ್ನಡಕ್ಕೆ ಅವಮಾನಿಸುವ ಯಾವುದೇ ಚಟುಚಟಿಕೆಗಳು ಪಾಲಿಕೆಯಲ್ಲಿ ನಡೆದರೆ ತಕ್ಕ ಪಾಠ ಕಲಿಸಲಾಗುವುದು ಎಂದು ಕರವೇ ಉಪಾಧ್ಯಕ್ಷ ರಾಜು ನಾಶಿಪುಡಿ ಹೇಳಿದರು. ಗುರುವಾರ ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು. ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಕನ್ನಡ ವಿರೋಧಿ ಚಟುವಟಿಕೆ ನಡೆದರೆ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸೂಪರ್ ಸೀಡ್ ಮಾಡುವಂತೆ ಸರ್ಕಾರವನ್ನು ಒತ್ತಾಯಿಸಲಾಗುವದು ಎಂದು ಎಚ್ಚರಿಸಿದರು.
ವರದಿ: ರಾಜು ಮುಂಡೆ




