——————————————–ಬೇಡಕಿ ಹಾಳದ ಸಿದ್ದೇಶ್ವರ ಪಲ್ಲಕ್ಕಿ ಕಟ್ಟೆ ಸಂರಕ್ಷಣೆ ಹಾಗೂ ಸ್ವಚ್ಛತೆ ಕಾರ್ಯ
ನಿಪ್ಪಾಣಿ: ದೇವರ ಸೇವೆ ಅಘಾದವಾದದ್ದ ,ಮಾನವ ತನ್ನ ದುಷ್ಕರ್ಮ,ಪಾಪನಾಶಕ್ಕಾಗಿ ದೇವರ ಮೊರೆ ಹೋಗುತ್ತಾನೆ. ದೈನಂದಿನ ಸತ್ಕಾರ್ಯಗಳ ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ನಿಷ್ಕಾಮ್ಯ ಸೇವೆ ಸಲ್ಲಿಸುತ್ತಿರುವುದಕ್ಕೆ ನಿಪ್ಪಾಣಿ ತಾಲೂಕಿನ ಬೇಡಕಿಹಾಳ ಗ್ರಾಮದ ರಾಜು ಜಮಾದಾರ ಉತ್ತಮ ಉದಾಹರಣೆ.

65 ವರ್ಷದ ಮುಸ್ಲಿಂ ಸಮಾಜದ ರಾಜು ಜಮಾದಾರ್ ದಿನನಿತ್ಯ ಬೆಳಗಿನ ಜಾವ 5.30 ರಿಂದ 6 ಗಂಟೆಯವರೆಗೆ ಬೇಡಕಿಹಾಳ ಶಮನೇವಾಡಿ ಸರ್ಕಲ್ ನಲ್ಲಿರುವ ಸಿದ್ದೇಶ್ವರ ದೇವರ ಪಲ್ಲಕ್ಕಿ ಕಟ್ಟೆಯ ಸಂರಕ್ಷಣೆಯ ಜೊತೆಗೆ ಸ್ವಚ್ಛತೆ ಕಾರ್ಯ ನಿರ್ವಹಿಸುತ್ತಾನೆ. ಈತ ಯಾವುದೇ ಪರಸ್ಥಳಕ್ಕೆ ಹೋದರು ಬೆಳಗಿನ ಜಾವ 5ಗಂಟೆಗೆ ಮಾತ್ರ ಸರ್ಕಲನಲ್ಲಿ ಹಾಜರಾಗಿರುತ್ತಾನೆ. ಸಿದ್ದೇಶ್ವರ ಕಟ್ಟೆ ಯ ಸುತ್ತಲಿನ ಕಸಗುಡಿಸುವುದು, ಪಕ್ಕದ ಬಸದಿಯಿಂದ ನೀರು ಹೊತ್ತುತಂದು ಕಟ್ಟೆ ತೊಳೆಯುವುದು, ಪುಷ್ಪ, ಧೂಪ ದೀಪ ಹಚ್ಚಿ ಸಿದ್ದೇಶ್ವರ ಪಾದಕ್ಕೆ ಮಸ್ತಕ ವಿಟ್ಟು ನಮಸ್ಕರಿಸಿದಾಗಲೇ ತನ್ನ ಮನಸ್ಸಿಗೆ ಶಾಂತಿ ನೆಮ್ಮದಿ ದೊರೆಯುತ್ತೆ ಎನ್ನುತ್ತಾನೆ ರಾಜು ಜಮಾದಾರ.
ಹಾಗಾದರೆ ಬನ್ನಿ ದೇವರ ಸೇವೆಯಲ್ಲಿಯೇ ಸಾರ್ಥಕತೆ ಪಡೆದ ಈತನ ದೈನಂದಿನ ಕಾರ್ಯ ಏನು? ಬಡತನ ಪರಿಸ್ಥಿತಿಯಲ್ಲೂ ಯಾರಿಂದಲೂ ಆರ್ಥಿಕ ಸಹಾಯ ಪಡೆಯದೆ ನಿಸ್ಕಾಮ್ಯ ಭಕ್ತಿ ಸೇವೆಯನ್ನು ಸಿದ್ದೇಶ್ವರ ಪಾದಕ್ಕೆ ಸಮರ್ಪಿಸುತ್ತಿದ್ದಾನೆ. ಹಾಗಾದರೆ ಬನ್ನಿ ನಾವು ತೋರಿಸ್ತಿವಿ ನೀವು ನೋಡಿ….,…. ರಾಜು ಜಮಾದಾರ್ ಅವರಿಗೆ ಓರ್ವ ಗಂಡು ಒಬ್ಬಳು ಹೆಣ್ಣುಮಗಳಿದ್ದು ಬೆಳಗಿನ ಸಮಯದಲ್ಲಿ ನಿರಂತರ ಪಲ್ಲಕ್ಕಿ ಕಟ್ಟಿ ಸ್ವಚ್ಛತೆ ಪೂಜೆ ಅರ್ಚನೆ ಎಂತಹ ನಾಸ್ತಿಕನಲ್ಲೂ ಭಕ್ತಿಯ ಸರೋವರ ಹರಿಸುವುದಂತು ಖಚಿತ. ಬೆಳಗಿನ ಸೇವೆಯ ನಂತರ ಬಿ ಎಸ್ ಹೈಸ್ಕೂಲಿನಲ್ಲಿ ಅಟೆಂಡರ್ ಎಂದು ಕಾರ್ಯ ನಿರ್ವಹಿಸುವುದರೊಂದಿಗೆ ಬೆಡಕಿಹಾಳ ಶಮನೆವಾಡಿ ಸೇರಿ ಗಡಿ ಭಾಗದ ಹಳ್ಳಿಗಳಲ್ಲಿ ರಾಜು ಜಮಾದಾರ ಭಕ್ತಿಯ ಪರಾಕಾಷ್ಟೆ ಮೆರೆದಿದ್ದಾರೆ.
ವರದಿ: ಮಹಾವೀರ ಚಿಂಚನೆ




