Ad imageAd image

ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಷಡಕ್ಷರಿ, ಖಜಾಂಚಿಯಾಗಿ ಶಿವರುದ್ರಯ್ಯ: ಅಭಿನಂದನೆ ಸಲ್ಲಿಸಿದ ರಾಜ್ಯ ಪರಿಷತ್ ಸದಸ್ಯ ಲೋಕೇಶ್

Bharath Vaibhav
ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಷಡಕ್ಷರಿ, ಖಜಾಂಚಿಯಾಗಿ ಶಿವರುದ್ರಯ್ಯ: ಅಭಿನಂದನೆ ಸಲ್ಲಿಸಿದ ರಾಜ್ಯ ಪರಿಷತ್ ಸದಸ್ಯ ಲೋಕೇಶ್
WhatsApp Group Join Now
Telegram Group Join Now

ತುರುವೇಕೆರೆ: ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾಗಿ ಎರಡನೇ ಬಾರಿಗೆ ಆಯ್ಕೆಯಾದ ಸಿ.ಎಸ್.ಷಡಕ್ಷರಿ ಹಾಗೂ ಮೊದಲ ಬಾರಿಗೆ ಖಜಾಂಚಿಯಾಗಿ ಆಯ್ಕೆಯಾದ ಶಿವರುದ್ರಯ್ಯ ವಿ.ವಿ. ಅವರನ್ನು ತುರುವೇಕೆರೆ ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಎಂ.ಬಿ.ಲೋಕೇಶ್ ಅಭಿನಂದನೆ ಸಲ್ಲಿಸಿದ್ದಾರೆ.

ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಬಾರಿಯ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆ ತೀವ್ರ ಕುತೂಹಲ ಹಾಗೂ ಪೈಪೋಟಿಯಿಂದ ಕೂಡಿತ್ತು. ಕಳೆದ ಬಾರಿ ಅಧ್ಯಕ್ಷರಾಗಿದ್ದ ಸಿ.ಎಸ್.ಷಡಕ್ಷರಿ ಅವರು ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾದ ೭ನೇ ವೇತನ ಜಾರಿ ಸೇರಿದಂತೆ ನೌಕರರ ಹಿತ ಕಾಪಾಡುವ ನಿಟ್ಟಿನಲ್ಲಿ ಸರ್ಕಾರದೊಂದಿಗೆ ಹೋರಾಟ ನಡೆಸಿ ಅನೇಕ ಅನುಕೂಲಗಳನ್ನು ಕಲ್ಪಿಸಿದ್ದರು. ಇನ್ನುಳಿದಂತೆ ಹಳೆಯ ಪಿಂಚಣಿ ಯೋಜನೆ ಮರುಜಾರಿ, ಆರೋಗ್ಯ ಸಂಜೀವಿನಿ ಜಾರಿ, ಪಿ.ಎಸ್.ಟಿ ಪದವೀಧರ ಶಿಕ್ಷಕರ ಸಿ ಅಂಡ್ ಆರ್ ತಿದ್ದುಪಡಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಸರ್ಕಾರದೊಂದಿಗೆ ನಿರಂತರ ಚರ್ಚೆ ನಡೆಸಿದ್ದರು. ಆದರೆ ಚುನಾವಣೆ ಬಂದಿದ್ದರಿಂದ ಬೇಡಿಕೆಗಳು ಹಾಗೇ ಉಳಿದಿತ್ತು. ಈಗ ಮತ್ತೊಮ್ಮೆ ಸಂಘದ ಅಧ್ಯಕ್ಷರಾಗಿ ಆಯ್ಕೆಯಾಗಿರುವುದರಿಂದ ನೌಕರರ ಬೇಡಿಕೆಗಳನ್ನು ಸರ್ಕಾರದಿಂದ ಕೊಡಿಸುತ್ತಾರೆನ್ನುವ ವಿಶ್ವಾಸ ದುಪ್ಪಟ್ಟಾಗಿದೆ ಎಂದರು.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಹಾಲಿ ರಾಜ್ಯಾಧ್ಯಕ್ಷರಾಗಿದ್ದ ಸಿ.ಎಸ್.ಷಡಕ್ಷರಿ ಅವರು ೫೦೭ಮತಗಳನ್ನು ಪಡೆದು ಪ್ರತಿಸ್ಪರ್ಧಿ ಬಿ.ಪಿ.ಕೃಷ್ಣೇಗೌಡರನ್ನು (447 ಮತ) 65 ಮತಗಳ ಅಂತರದಲ್ಲಿ ಸೋಲಿಸಿ ಎರಡನೇ ಬಾರಿಗೆ ರಾಜ್ಯಾಧ್ಯಕ್ಷ ಗದ್ದುಗೆಗೇರಿದ್ದಾರೆ. ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಪ್ರಜಾಸತ್ತಾತ್ಮಕ ಬಣದ ವಿ.ವಿ.ಶಿವರುದ್ರಯ್ಯ ಅವರು 485 ಮತಗಳನ್ನು ಪಡೆದು ಪ್ರತಿಸ್ಪರ್ಧಿ ನಾಗರಾಜ ಜುಮ್ಮನ್ನನವರ್ (467) ಅವರನ್ನು 18 ಮತಗಳಿಂದ ಸೋಲಿಸಿ ಮೊದಲ ಬಾರಿಗೆ ಖಜಾಂಚಿಯಾಗಿ ಆಯ್ಕೆಯಾಗಿದ್ದಾರೆ. ಸಂಘದ ನೂತನ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾದ ಸಿ.ಎಸ್.ಷಡಕ್ಷರಿ ಹಾಗೂ ಖಜಾಂಚಿ ಶಿವರುದ್ರಯ್ಯ ಅವರನ್ನು ತುರುವೇಕೆರೆ ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘ ಹಾಗೂ ತಾಲ್ಲೂಕಿನ ಸಮಸ್ತ ಸರ್ಕಾರಿ ನೌಕರರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿದರು.

ವರದಿ: ಗಿರೀಶ್ ಕೆ ಭಟ್

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!