Ad imageAd image
- Advertisement -  - Advertisement -  - Advertisement - 

ಸೆಪ್ಟೆಂಬರ್ 16 ರಂದು ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ

Bharath Vaibhav
ಸೆಪ್ಟೆಂಬರ್ 16 ರಂದು ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ
WhatsApp Group Join Now
Telegram Group Join Now
ಬೆಳಗಾವಿ: ಪುಣೆಯಿಂದ ಬೆಳಗಾವಿ ಮೂಲಕ ಹುಬ್ಬಳಿಯವರೆಗೆ ವಂದೇ ಭಾರತ್ ರೈಲಿನ ಸಂಚಾರಕ್ಕೆ ಸೆಪ್ಟೆಂಬರ್ 16 ರಂದು ಅಹ್ಮದಾಬಾದ್‌ನಿಂದ ವರ್ಚುವಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ರಾಜ್ಯಸಭಾ ಸಂಸದ ಈರಣ್ಣ ಕಡಾಡಿ ಹೇಳಿದ್ದಾರೆ.
 ಸಂಸದ ಈರಣ್ಣ ಕಡಾಡಿ ಅವರು ಪುಣೆ-ಹುಬ್ಬಳ್ಳಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪುಣೆಯಿಂದ ಸಂಜೆ 04.15 ಕ್ಕೆ ಹೊರಟು ರಾತ್ರಿ 09.00 ಕ್ಕೆ ಬೆಳಗಾವಿಗೆ ಆಗಮಿಸಲಿದೆ. ಈ ಸಂದರ್ಭದಲ್ಲಿ ಬೆಳಗಾವಿ ರೈಲು ನಿಲ್ದಾಣದಲ್ಲಿ ರಾತ್ರಿ 08.00 ಗಂಟೆಗೆ ಸಾಂಸ್ಕೃತಿಕ ಹಾಗೂ ಸ್ವಾಗತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ರೈಲು ಬಳಕೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಮತ್ತು ಈ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಪುಣೆಯಿಂದ-ಹುಬ್ಬಳ್ಳಿಗೆ 8 ಗಂಟೆ 30 ನಿಮಿಷದ ಅವಧಿಯಲ್ಲಿ ತಲುಪಲಿದೆ ಎಂದರು.
ಸೋಮವಾರ 16 ರಂದು ಪುಣೆಯಿಂದ ವಂದೇ ಭಾರತ್ ಎಕ್ಸ್ಪ್ರೆಸ್ ಸಂಚರಿಸಲಿದೆ ಹಾಗೂ ಬುಧವಾರ ಸೆಪ್ಟೆಂಬರ್ 18ರಿಂದ ಹುಬ್ಬಳ್ಳಿಯಿಂದ ಆರಂಭವಾಗಲಿದ್ದು ವಾರದಲ್ಲಿ ಮೂರು ಬಾರಿ  ಬುಧವಾರ, ಶುಕ್ರವಾರ ಹಾಗೂ ರವಿವಾರ ಮತ್ತು ಪುಣೆಯಿಂದ (ಗುರುವಾರ, ಶನಿವಾರ ಮತ್ತು ಸೋಮವಾರ) ಸಂಚರಿಸಲಿದೆ. ಪ್ರಯಾಣಿಕರ ಸ್ಪಂದನೆ ಮತ್ತು ಜನದಟ್ಟಣೆಯನ್ನು ಗಮನದಲ್ಲಿಟ್ಟು ಮುಂದೆ ಈ ರೈಲುನ್ನು ಪ್ರತಿದಿನ ಸಂಚರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು ಎಂದರು.
ರೈಲಿನ ಸಮಯ
ರೈಲು ಸಂ. 20669 ಬೆಳಗ್ಗೆ 05.00ಕ್ಕೆ ಹುಬ್ಬಳಿ ನಿಲ್ದಾಣದಿಂದ ಹೊರಟು 05.15ಕ್ಕೆ ಧಾರವಾಡ, 06.55ಕ್ಕೆ ಬೆಳಗಾವಿ, 09.15ಕ್ಕೆ ಮೀರಜ್, 09.30ಕ್ಕೆ ಸಾಂಗಲಿ, 10.35ಕ್ಕೆ ಸತಾರಾ ಹಾಗೂ 01.30ಕ್ಕೆ ಪುಣೆ ತಲುಪಲಿದೆ.
ರೈಲು ಸಂ. 20670 ಮಧ್ಯಾಹ್ನ 02.15ಕ್ಕೆ ಪುಣೆಯಿಂದ ಹೊರಟು ಸಂಜೆ 04.08 ಕ್ಕೆ ಸತಾರಾ, 06.10ಕ್ಕೆ ಸಾಂಗಲಿ, 06.40ಕ್ಕೆ ಮೀರಜ್, ರಾತ್ರಿ 08.35 ಕ್ಕೆ ಬೆಳಗಾವಿ, 10.20ಕ್ಕೆ ಧಾರವಾಡ ಹಾಗೂ 10.45ಕ್ಕೆ ಹುಬ್ಬಳಿ ನಿಲ್ದಾಣಕ್ಕೆ ತಲುಪಲಿದೆ ಪ್ರಯಾಣಿಕರು ಈ ರೈಲು ಸೇವೆಯ ಸದುಪಯೋಗ ಪಡಿಸಿಕೊಳ್ಳಬೇಕೆಂದರು.
WhatsApp Group Join Now
Telegram Group Join Now
Share This Article
error: Content is protected !!