Ad imageAd image

ಸದಲಗಾ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯೋತ್ಸವ ಸಂಭ್ರಮ

Bharath Vaibhav
ಸದಲಗಾ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯೋತ್ಸವ ಸಂಭ್ರಮ
WhatsApp Group Join Now
Telegram Group Join Now

ಚಿಕ್ಕೋಡಿ: ಸದಲಗಾ ಶಿಕ್ಷಣ ಸಂಸ್ಥೆ, ಸದಲಗಾ ಇವರ ವತಿಯಿಂದ ಕರ್ನಾಟಕ ರಾಜ್ಯೋತ್ಸವ 2025 ರ ಉತ್ಸವವನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮವು ಭುವನೇಶ್ವರಿ ದೇವಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಆರಂಭಗೊಂಡಿತು ಪೂಜೆಯನ್ನು ಸಂಸ್ಥೆಯ ಅಧ್ಯಕ್ಷರಾದ ಪಿ. ಜೆ. ಪಾಟೀಲ್, ಕಾರ್ಯದರ್ಶಿಗಳು, ಸಂಚಾಲಕರು ಹಾಗೂ ಎಲ್ಲಾ ಸಿಬ್ಬಂದಿ ವರ್ಗದವರು ಭಕ್ತಿ ಭಾವದಿಂದ ನೆರವೇರಿಸಿದರು.

ಅಧ್ಯಕ್ಷತೆಯ ಭಾಷಣವನ್ನು ಡಾ. ಜ್ಯೋತಿ ಚಿಂಚಣಿಕರ ಅವರು ನಡೆಸಿ, ರಾಜ್ಯೋತ್ಸವದ ಮಹತ್ವದ ಕುರಿತು ಹಿತನುಡಿಗಳನ್ನು ಹೇಳಿದರು.
ನಿರೂಪಣೆಯನ್ನು ಶ್ರೀಮತಿ ಚೇತನ ಮಾಲಗತ್ತಿ (ವಾಣಿಜ್ಯ ವಿಭಾಗ) ಅವರು ನಿರ್ವಹಿಸಿದರು ಮತ್ತು ವಂದನಾರ್ಪಣೆಯನ್ನು ಶ್ರೀಮತಿ ಪಿ. ಜೆ. ಗಣೆ (ವಿಜ್ಞಾನ ವಿಭಾಗ ಉಪನ್ಯಾಸಕಿ) ಅವರು ಸಲ್ಲಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಮನರಂಜನಾತ್ಮಕ ಸಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಿ ಎಲ್ಲರ ಮೆಚ್ಚುಗೆ ಗಳಿಸಿದರು. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆಯೂ ನೆರವೇರಿಸಲಾಯಿತು.

ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಸದಲಗಾ ಆಂಗ್ಲ ಮಾಧ್ಯಮ ಶಾಲೆ ಹಾಗೂ ಸದಲಗಾ ಪ್ರೌಢಶಾಲೆಯ ವಿದ್ಯಾರ್ಥಿಗಳಿಂದ ಗ್ರಾಮದ ಬೀದಿ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಹುಡುಗರು ಮತ್ತು ಹುಡುಗಿಯರು ಕೆಂಪು–ಹಳದಿ ಧ್ವಜಗಳನ್ನು ಹಾರಿಸುತ್ತಾ “ಜೈ ಕರ್ನಾಟಕ ಮಾತೆ!” ಎಂಬ ಘೋಷಣೆಗಳಿಂದ ಸಡಗರ ತುಂಬಿಸಿದರು. ಕಲಾ ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯ ಸದಲಗಾ ವಿದ್ಯಾರ್ಥಿಗಳು ಕೂಡ ಭಾಗವಹಿಸಿದ್ದರು.

ಈ ಕಾರ್ಯಕ್ರಮದಲ್ಲಿ ದೇಶಭಕ್ತಿ, ಸಂಸ್ಕೃತಿ ಮತ್ತು ಏಕತೆಯ ಹಬ್ಬವಾದ ಕರ್ನಾಟಕ ರಾಜ್ಯೋತ್ಸವವನ್ನು ಸದಲಗಾ ಶಿಕ್ಷಣ ಸಂಸ್ಥೆಯಲ್ಲಿ ಹರ್ಷೋಲ್ಲಾಸದಿಂದ ಆಚರಿಸಲಾಯಿತು.

ವರದಿ: ರಾಜು ಮುಂಡೆ 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!