Ad imageAd image
- Advertisement -  - Advertisement -  - Advertisement - 

7ನೇ ವರ್ಷದ ಗಣೇಶೋತ್ಸವದಲ್ಲಿ ಪ್ರೇಕ್ಷಕರ ಮನರಂಜಿಸಿದ ರಕ್ತರಾತ್ರಿ ನಾಟಕ.

Bharath Vaibhav
7ನೇ ವರ್ಷದ ಗಣೇಶೋತ್ಸವದಲ್ಲಿ ಪ್ರೇಕ್ಷಕರ ಮನರಂಜಿಸಿದ ರಕ್ತರಾತ್ರಿ ನಾಟಕ.
WhatsApp Group Join Now
Telegram Group Join Now

ಸಿರುಗುಪ್ಪ : –ವಿಶ್ವ ಹಿಂದೂಪರಿಷತ್ ಮತ್ತು ಬಜರಂಗದಳದ ಸಹಯೋಗದಲ್ಲಿ 7ನೇ ವಾರ್ಷಿಕ ಗಣೇಶೋತ್ಸವದ ನಿಮಿತ್ತ ನಗರದ ನಿಟ್ಟೂರು ನರಸಿಂಹಮೂರ್ತಿ ಅವರ ಬಯಲು ಜಾಗದಲ್ಲಿ ಕಾರ್ಯಕರ್ತರಿಂದ ಬುಧವಾರ ರಾತ್ರಿ ಏರ್ಪಡಿಸಿದ್ದ ಕಂದಗಲ್ ಹನುಮಂತರಾಯ ವಿರಚಿತ ರಕ್ತರಾತ್ರಿ ನಾಟಕವು ಪ್ರೇಕಕ್ಷರ ಮನರಂಜಿಸಿತು.

ಬಯಲು ನಾಟಕಕ್ಕೆ ಚಾಲನೆ ನೀಡಿದ ಕೃಷ್ಣನ ಪಾತ್ರ, ರಾರಾವಿಯ ಚಿದಾನಂದ ಗವಾಯಿಗಳು ಮಾತನಾಡಿ ನಮ್ಮ ಪೂರ್ವಜರು ಉಳಿಸಿಕೊಂಡು ಬಂದಿರುವ ಈ ಬಯಲಾಟದ ಕಲೆಯನ್ನು ಮುಂದಿನ ಪೀಳಿಗೆಯವರೆಗೂ ಮುನ್ನಡೆಸುವ ಕಾರ್ಯ ನಮ್ಮದಾಗಿದೆ.
ಗ್ರಾಮೀಣ ಸೊಗಡಿನ ಈ ಕಲೆಯನ್ನು ನಗರ ಪ್ರದೇಶದಲ್ಲೂ ಹಬ್ಬಿಸುವ ಕಾರ್ಯವನ್ನು ಮಾಡಿದ ಎಲ್ಲಾ ಹಿಂದೂಪರ ಸಂಘಟನೆಗಳ ಕಾರ್ಯಕರ್ತರ ಕಾರ್ಯ ಶ್ಲಾಘನೀಯ.

ನಗರದ ಹೃದಯ ಭಾಗದಲ್ಲಿ ಭವ್ಯ ಕಾರ್ಯಕ್ರಮ ಮತ್ತು ಅದ್ದೂರಿ ಗಣೇಶೋತ್ಸವಕ್ಕೆ ಸ್ಥಳವನ್ನು ನೀಡಿದ ದಾನಿಗಳನ್ನು ಸ್ಮರಿಸಬೇಕೆಂದರು.
ಹಾಸ್ಯ ಕಲಾವಿದ ನರಸಿಂಹಮೂರ್ತಿ ಶಕುನಿ ಪಾತ್ರದಲ್ಲಿ ಅಶ್ವತ್ಥಾಮನಾಗಿ ರಾವಿಹಾಳ್ ಗುರುರಾಜ, ದುರ್ಯೋಧನ ಪಾತ್ರದಲ್ಲಿ ಹಚ್ಚೊಳ್ಳಿ ಅಮರೇಶಸ್ವಾಮಿ, ಭೀಮನಾಗಿ ಗೆಣಿಕೆಹಾಳ್ ತಿಮ್ಮನಗೌಡ, ಧರ್ಮರಾಯನಾಗಿ ಕೃಷ್ಣಪ್ಪ ಪ್ರಾಂಶುಪಾಲರು, ಅರ್ಜುನನಾಗಿ ಬಿ.ಕೆ.ಚನ್ನಬಸವ, ಚಿತ್ರಸೇನನಾಗಿ ಶರಣಪ್ಪ, ಕರ್ಣನಾಗಿ ಬಸವ, ಶಿವನ ಪಾತ್ರದಲ್ಲಿ ರೌಡೂರು ಬಸವರಾಜ, ಕಲಿ ಪಾತ್ರದಲ್ಲಿ ರಾಜಶೇಖರಸ್ವಾಮಿ, ದುರ್ಜಯನ ಪಾತ್ರದಲ್ಲಿ ರಾವಿಹಾಳ್ ಸುಮದ್ವ ಅಭಿನಯಿಸಿದರು.

ಮಹಾಭಾರತ ಕಥೆಯ ಕೊನೆಯ ಮೂರು ದಿನಗಳಲ್ಲಿನ ಸಾರಾಂಶವನ್ನು ರಾಜ್ಯಪ್ರಶಸ್ತಿ ಪುರಸ್ಕೃತರಾದ ಕಲಾವಿದೆ ವೀಣಾ ಅವರು ದ್ರೌಪತಿಯಾಗಿ, ಜಯಶ್ರೀ ಪಾಟೀಲ್ ಅವರು ಬಾನುಮತಿಯಾಗಿ, ಮೀನಾಕ್ಷಿ ಪಾಟೀಲ್ ಉತ್ತರೆಯಾಗಿ ಅಭಿನಯಿಸಿದರೆ ಹರಪನಹಳ್ಳಿಯ ಮೌನೇಶ್ ಕಲ್ಲಳ್ಳಿ ಸ್ತ್ರೀ ಪಾತ್ರದ ನೃತ್ಯಗೈದು ಪ್ರೇಕ್ಷಕರ ಗಮನ ಸೆಳೆದರು.

ಹಾರ್ಮೋನಿಯಂ ಮಾಸ್ಟರ್ ತಿಪ್ಪೆಸ್ವಾಮಿ, ತಬಲವಾದಕ ವಿಷ್ಣುತೀರ್ಥ ನಾಟಕಕ್ಕೆ ಪೂರಕ ಸಂಗೀತವನ್ನು ಒದಗಿಸಿದರು.

ಕಥಾ ಸಂಚಾಲಕ ಬಸವರಾಜ್ ಜವಳಗೇರ ಅವರು ನಿರ್ದೇಶಿದರು.
ಉತ್ತಮ ಪ್ರರ್ದಶನ ನೀಡಿದ ಪಾತ್ರಧಾರಿಗಳನ್ನು, ಸಂಗೀತ, ವೇಷಭೂಷಣ ಮತ್ತು ಬಣ್ಣ ಹಚ್ಚುವ ಕಲೆಗಾರರನ್ನು ಕಾರ್ಯಕರ್ತರಿಂದ ಅಭಿನಂದಿಸಿ ಸನ್ಮಾನಿಸಲಾಯಿತು.

ವರದಿ : ಶ್ರೀನಿವಾಸ ನಾಯ್ಕ.

WhatsApp Group Join Now
Telegram Group Join Now
Share This Article
error: Content is protected !!