ವಿಜಯಪುರ: ಶಾಲೆಗೆ ಹೋಗುವ ಮಕ್ಕಳು ಏನೆಲ್ಲಾ ಮಾಡುತ್ತಾರೆ ಎನ್ನುವುದು ತಿಳಿಯುವುದು ಪೋಷಕರಿಗೆ ಕಷ್ಟವಾಗುತ್ತಿಲ್ಲ. ಇಲ್ಲಸಲ್ಲದ ಸಮಸ್ಯೆಗಳನ್ನು ಕೆಲವೊಮ್ಮೆ ತಂದೊಡ್ಡುತ್ತಾರೆ, ಇದು ವಿಜಯಪುರದಲ್ಲಿ ನಡೆದ ಘಟನೆ ತಾಜಾ ಉದಾಹರಣೆ. ಶಾಲೆಗೆಂದು ತೆರಳಿದ್ದ ಯುವತಿಗೆ ಆತನ ಸ್ನೇಹಿತ ತಾಳಿ ಕಟ್ಟಿದ್ದಾನೆ. ಈ ಸಂಬಂಧ ಇದೀಗ ಪೊಲೀಸ್ ಪ್ರಕರಣ ಎದುರಿಸುವಂತಾಗಿದೆ.
ಅಪ್ರಾಪ್ತ ವಯಸ್ಸಿನ ಬಾಲಕಿಗೆ ತಾಳಿ ಕಟ್ಟಿ, ಅದನ್ನು ತನ್ನ ಮೋಬೈಲ್ ನಲ್ಲಿ ಚಿತ್ರೀಕರಿಸಿ, ನಂತರ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿರುವುದು ಎಷ್ಟು ಸರಿ ಎಂದು ಅನೇಕರು ಪ್ರಶ್ನಿಸುತ್ತಿದ್ದಾರೆ. ಈ ಘಟನೆ ಸಂಬಂಧ ಮುದ್ದೇಬಿಹಾಳದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ, ಹಾಗೂ ಅವರನ್ನು ಕೂಡಲೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಯುವಕನೊರ್ವ ಅಪ್ರಾಪ್ತ ಬಾಲಕಿಗೆ ಸಿನಿಮಾ ಸ್ಟೈಲ್ ನಲ್ಲಿ ತಾಳಿ ಕಟ್ಟಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ, ಸಾಕಷ್ಟು ವೈರಲ್ ಆಗಿರುವ ಈ ವಿಡಿಯೋ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಸರ್ಕಾರಿ ವಸತಿ ಶಾಲೆಯ ಬಳಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ.ಯುವಕನೊಬ್ಬ ಅಪ್ರಾಪ್ತೆಗೆ ತಾಳಿ ಕಟ್ಟಿದ್ದಾನೆ ಯುವಕನ ಹೆಸರು ಬಹಿರಂಗವಾಗಿದ್ದು ಮೌನೇಶ ಮಾದರ ಎಂದು ಗೊತ್ತಾಗಿದೆ. ಅಪ್ರಾಪ್ತೆಗೆ ತಾಳಿ ಕಟ್ಟಿದ ಯುವಕನಾಗಿದ್ದು ಅಪ್ರಾಪ್ತೆಗೆ ಮೌನೇಶ ತಾಳಿಕಟ್ಟೊ ವಿಡಿಯೊ ಆತನ ಸ್ನೇಹಿತ ಸಂಗಮೇಶ ತನ್ನ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾನೆ ಎಂದು ತಿಳಿದುಬಂದಿದೆ.
ಘಟನೆಯ ವಿವರ
ಸರ್ಕಾರಿ ವಸತಿ ಶಾಲೆಯಲ್ಲಿದ್ದ ಅಪ್ರಾಪ್ತ ಬಾಲಕಿಯನ್ನು ಶಾಲೆ ನಡೆಯುವ ಸಂದರ್ಭದಲ್ಲಿ ತಾಳಿಕಟ್ಟಿದ್ದಾನೆ ಎನ್ನಲಾಗಿದೆ. ತಮ್ಮ ಸಂಬಂಧಿಕರು ಬಂದಿದ್ದಾರೆ ಎಂದು ಸುಳ್ಳು ಹೇಳಿ ಬಾಲಕಿಯನ್ನು ಶಾಲೆಯಿಂದ ಹೊರಗಡೆ ಕರೆಯಿಸಿ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಇನ್ನು ತಾಳಿಕಟ್ಟೊ ವೇಳೆ ಬಾಲಕಿ ಕೂಡ ಯಾವುದೇ ಪ್ರತಿರೋಧ ವ್ಯಕ್ತಪಡಿಸಿಲ್ಲ. ನವೆಂಬರ್ 24 ರಂದು ನಡೆದಿರೋ ಈ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಇನ್ನು ಸಂಬಂಧಗಳನ್ನೆ ತಿಳಿಯದ ಅಪ್ರಾಪ್ತೆ ನಂತರ ಈ ವಿಷಯ ತನ್ನ ತಾಯಿ ತಂದೆಗೆ ವಿಚಾರ ತಿಳಿಸಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಸಂಬಂಧ ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಮೌನೇಶ ಹಾಗೂ ಸಂಗಮೇಶ ವಿರುದ್ದ ಪೋಕ್ಸೊ ಪ್ರಕರಣ ದಾಖಲಾಗಿದೆ. ಆರೋಪಿತರು ಪ್ರಕರಣ ದಾಖಲಾಗುತ್ತಿದ್ದಂತೆ ಪರಾರಿಯಾಗಿದ್ದಾರೆ. ಆರೋಪಿತರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.
ತಾಳಿ ಕಟ್ಟಿರುವ ಮೌನೇಶನಿಗೆ ಎಷ್ಟು ವಯಸ್ಸು ಎಂದು ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಇವರಿಬ್ಬರಿಗೂ ಕಳೆದ ಹಲವಾರು ದಿನಗಳಿಂದ ಸ್ನೇಹವಿತ್ತು ಎಂದು ಶಂಕಿಸಿರುವ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.