
ರಾಮದುರ್ಗ: ತಾಲ್ಲೂಕಿನಲ್ಲಿ ಪ್ರತಿ ವರ್ಷದಂತೆ ಈ ವರ್ಷವು ರಕ್ಷಾ ಬಂಧನ ಹಬ್ಬವನ್ನು ರಾಮದುರ್ಗದ ಪೊಲೀಸ್ ಸಿಬ್ಬಂದಿಯೊಂದಿಗೆ ಹಾಗೂ ಮಾಜಿ ಸೈನಿಕರೊಂದಿಗೆ ಆಚರಣೆ ಮಾಡಿದ ಬಿಜೆಪಿ ಮಹಿಳಾ ಮೋರ್ಚಾ ಪದಾಧಿಕಾರಿಗಳು ಹಾಗೂ ಮಹಿಳಾ ಕಾರ್ಯಕರ್ತರು ದೇಶದ ಸೈನಿಕರು ಹಾಗೂ ಪೊಲೀಸರು ಕೂಡ ನಮ್ಮ ಕುಟುಂಬದವರೆ ಎನ್ನುವ ಸಂದೇಶವನ್ನು ಸಾರುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ರಾಮದುರ್ಗ ಪೊಲೀಸ್ ಠಾಣೆಯಲ್ಲಿ ಆಚರಿಸಲಾಯಿತು ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರು ,ಜಿಲ್ಲಾ ಸಹ ಸಂಚಾಲಕರು ಆದ ಶ್ರೀಮತಿ ಶಾಲಿನಿ ಇಳಿಗೇರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷರು ಆದ. ಕೆ. ವಿ. ಪಾಟೀಲ, ಮಂಡಲ ಸಂಚಾಲಕರು ಆದ ರಾಧಿಕಾಧೂತ್,ಸಹ ಸಂಚಾಲಕರ ಆದ ಮಂಜುಳಾ ಅಕ್ಕನವರ,ಗೀತಾ ಕಲ್ಲೂರ, ಬಿಜೆಪಿ ಮುಖಂಡರು ಹಾಗೂ ಎಲ್ಲಾ ಮಹಿಳಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.
ವರದಿ: ಮಂಜುನಾಥ ಕಲಾದಗಿ




