Ad imageAd image

ಶಾಂತಿ ನಿಕೇತನ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಾ ಬಂಧನ ಆಚರಣೆ.

Bharath Vaibhav
ಶಾಂತಿ ನಿಕೇತನ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಾ ಬಂಧನ ಆಚರಣೆ.
WhatsApp Group Join Now
Telegram Group Join Now

ಮುದಗಲ್ಲ :– ಶಾಂತಿ ನಿಕೇತನ ಆಂಗ್ಲ ಮಾಧ್ಯಮ ಪ್ರೌಡ ಶಾಲೆಯ ವಿದ್ಯಾರ್ಥಿಗಳಿಂದ ರಕ್ಷಾ ಬಂಧನ.ಆಡಿಯಲ್ಲಿ ಬುಧವಾರ ರಕ್ಷಾ ಬಂಧನ ಕಾರ್ಯಕ್ರಮವನ್ನು ಶಾಲಾ ಮಕ್ಕಳಿಗಾಗಿ ಆಯೋಜಿಸಲಾಗಿತ್ತು.

ಮಾತನಾಡಿದ ಸಂದರ್ಭದಲ್ಲಿ ಶಿಕ್ಷಕರಾದ ಅಮ್ಜದ ಕಂದಗಲ್ಲ ಮಾತನಾಡಿ, ಸೋದರತ್ವದ ಭಾಂದವ್ಯ ಸಾರುವ ಹಬ್ಬವೇ ರಕ್ಷಾ ಬಂಧನವಾಗಿದೆ ಅಣ್ಣ-ತಂಗಿಯವ ಮಧ್ಯೆ ಪ್ರೀತಿಯನ್ನು ಮೂಡಿಸುವ ಹಬ್ಬವಾಗಿ ರಾಖಿ ಹಬ್ಬ ದ್ವಾಪರಯುಗದಿಂದಲೂ ಸಹಾ ಆಚರಣೆಯಲ್ಲಿ ಇದೆ ನಮ್ಮ ಶಾಲೆಯಲ್ಲಿ ಈ ಹಬ್ಬವನ್ನು ಆಚರಣೆ ಮಾಡುವುದರ ಮೂಲಕ ಶಾಲೆಯಲ್ಲಿ ಅಭ್ಯಾಸವನ್ನು ಮಾಡುವ ಮಕ್ಕಳಲ್ಲಿ ಸಹೋದರ ಭಾವನೆಯನ್ನು ಮೂಡಿಸುವ ವಾತಾವರಣವನ್ನು ನಿರ್ಮಾಣ ಮಾಡಲಾಗುವುದು ಎಂದರು.

ಸೋದರಿಗೆ ರಕ್ಷಣೆಯ ಭರವಸೆಯನ್ನು ನೀಡುವ ಸೋದರತೆಯನ್ನು ಸಾರುವ ರಕ್ಷಾ ಬಂಧನಕ್ಕೆ ಶತಮಾನಗಳ ಇತಿಹಾಸ ಇದೆ, ಪೌರಾಣಿಕ ಹಿನ್ನಲೆಯನ್ನು ಸಹಾ ಹೊಂದಿದೆ. ರಕ್ಷಾ ಬಂಧನ ಎನ್ನುವುದು ಪವಿತ್ರವಾದ ಸಂಸ್ಕøತ ಪದವಾಗಿದೆ. ರಕ್ಷಣೆಯ ಬಂಧ ಎಂದು ಇದರ ಅರ್ಥ, ರಕ್ಷಾ ಬಂಧನದಲ್ಲಿ ಸಹೋದರಿಯರು ತಮ್ಮ ಸಹೋದರರಿಗೆ ಏಳ್ಗೆಯನ್ನು ಬಯಸುತ್ತಾರೆ. ಭಗವಂತ ಇವರಿಗೆ ಧೀರ್ಘಾಯಷ್ಯಕ್ಕಾಗಿ ವ್ರತವನ್ನು ಆಚರಣೆ ಮಾಡುತ್ತಾ ಸಹೋದರನ ಮಣಿ ಕೈಗೆ ರಕ್ಷಾ ದಾರವನ್ನು ಕಟ್ಟುತ್ತಾರೆ. ಇದರ ಮೂಲಕ ಸಹೋದರನಿಂದ ರಕ್ಷಣೆಯನ್ನು ಭರವಸೆಯನ್ನು ಪಡೆಯುತ್ತಾರೆ. ಇದರೊಂದಿಗೆ ಸಹೋದರಿಯನ್ನು ರಕ್ಷಿಸುವ ಜವಾಬ್ದಾರಿಯನ್ನು ನೀಡುತ್ತಾನಲ್ಲದೆ ಸಹೋದರ-ಸಹೋದರಿಯ ನಡುವಿನ ಸಂಬಂಧ ಬಲವಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕರಾದ,ಶ್ರೀಮತಿ ಸುನಿತಾ, ಅನೀಸಾ ಬೇಗಂ, ಜೋತಿ, ಮುಸ್ಕಾನ್, ಸುಮಾಯಾ,ರುಶಾನಾಬೇಗಂ ,ಆಮ್ಜದ್ ಕಂದಗಲ್ಲ , ಚಾಂದಪಾಶ ಪವೇಜ್ ರವಿಕುಮಾರ್, ಶಿವಬಸಪ್ಪ,ಶಿಲ್ಪಾ, ಇತರರು ಉಪಸ್ಥಿತರಿದ್ದರು.

ವರದಿ:- ಮಂಜುನಾಥ ಕುಂಬಾರ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!