ಹುಬ್ಬಳ್ಳಿ:- ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಅಕ್ಕಂದಿರ ಬಳಗದ ವತಿಯಿಂದ ರಕ್ಷಾಬಂಧನದ ಕುರಿತು ಮಾಹಿತಿ ನೀಡುತ್ತಾ ಸುವರ್ಣ ಕರ್ನಾಟಕ ಕಛೇರಿ ಉದ್ಘಾಟನೆ ವೇಳೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ಸಂಸದರಾದ ಜಗದೀಶ್ ಶೆಟ್ಟರ್ ಅವರಿಗೆ ಹಾಗೂ ಎಲ್ಲ ಮಾಧ್ಯಮ ಮಿತ್ರರಿಗೆ ಹಾಗೂ ಅಲ್ಲಿ ನೆರೆದಿರುವಂತಹ ಎಲ್ಲ ಅಣ್ಣತಮ್ಮಂದಿರಿಗೆ ರಾಕಿ ಕಟ್ಟುವ ಮೂಲಕ ರಕ್ಷಾ ಬಂಧನವನ್ನು ಆಚರಿಸಲಾಯಿತು.
ಈ ಸಮಯದಲ್ಲಿ ಮಾತನಾಡಿದ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಹಿರಿಯ ಅಕ್ಕನವರಾದ ನಿರ್ಮಲ ಅಕ್ಕನವರು ರಕ್ಷಾ ಬಂಧನ ಎಲ್ಲ ಅಣ್ಣ ತಮ್ಮಂದಿರ ಭಾವನೆಗಳ ಜೊತೆಗೆ ಬೆರೆಯುವ ಹಬ್ಬವೇ ಈ ರಕ್ಷಾ ಬಂಧನ ಎಂದು ನಡೆಸಿಕೊಂಡು ಬರಲಾಗಿದೆ.ಈ ಹಬ್ಬವು ಎಲ್ಲ ಅಣ್ಣ ತಮ್ಮಂದಿರ ಮನಸ್ಸಿನಲ್ಲಿ ಒಳ್ಳೆ ಭಾವನೆಯನ್ನು ಉಂಟುಮಾಡಲಿ ಹಾಗೂ ಎಲ್ಲರೂ ಜಗತ್ತಿನ ಏಳಿಗೆಗಾಗಿ ಶ್ರಮಿಸೋಣ ಒಳ್ಳೆಯ ಕೆಲಸಗಳನ್ನು ಮಾಡೋಣ ಎಂದರು.
ಈ ಸಂದರ್ಭದಲ್ಲಿ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿ ಮಂಡಳಿಯ ಸದಸ್ಯರುಗಳಾದ ಚೆನ್ನಮ್ಮ ಅಕ್ಕನವರು ಲತಾ ಅಕ್ಕನವರು ಹಾಗೂ ನಾಗಲಕ್ಷ್ಮಿ ಅಕ್ಕನವರು ಹಾಗೂ ಮುಂತಾದ ಅಕ್ಕಂದಿರುಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವರದಿ :-ನಿತೀಶಗೌಡ ತಡಸ ಪಾಟೀಲ್