Ad imageAd image

ರಕ್ತದಾನ ಮಹಾದಾನ – ರಕ್ತದಾನ ಮಾಡಿ ಜೀವ ಉಳಿಸಿ : ಸುಭಾಷ್ ಪಾಟೀಲ

Bharath Vaibhav
ರಕ್ತದಾನ ಮಹಾದಾನ – ರಕ್ತದಾನ ಮಾಡಿ ಜೀವ ಉಳಿಸಿ : ಸುಭಾಷ್ ಪಾಟೀಲ
WhatsApp Group Join Now
Telegram Group Join Now

ಭಾರತೀಯ ಜನತಾ ಪಾರ್ಟಿ ಯುವ ಮೋರ್ಚಾ ವತಿಯಿಂದ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಹಾಗೂ ಸೇವಾ ಪಾಕ್ಷಿಕ ಅಭಿಯಾನ ಅಂಗವಾಗಿ ರಕ್ತದಾನ ಶಿಬಿರ

 

ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಹಾಗೂ ಸೇವಾ ಪಾಕ್ಷಿಕ ಅಭಿಯಾನದ ಅಂಗವಾಗಿ ಇಂದು ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾ ಕಾರ್ಯಾಲಯದಲ್ಲಿ ಯುವ ಮೋರ್ಚಾ ವತಿಯಿಂದ ರಕ್ತದಾನ ಶಿಬಿರ ನಡೆಯಿತು.

ಭಾರತೀಯ ಜನತಾ ಪಾರ್ಟಿ ಬೆಳಗಾವಿ ಗ್ರಾಮಂತರ ಜಿಲ್ಲಾಧ್ಯಕ್ಷರಾದ ಸುಭಾಷ್ ಪಾಟೀಲ ರಕ್ತದಾನ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿ ಜಾಗತಿಕ ಯುಗದಲ್ಲಿ ಯುವ ಜನತೆ ರಕ್ತದಾನದ ಮಹತ್ವದ ಮನವರಿಕೆಯನ್ನು ಮಾಡಿಕೊಳ್ಳುವ ಕಡೆಗೆ ಸಾಗಬೇಕು.ರಕ್ತದಾನ ಮಾಡುವುದರಿಂದ ಸಾವು-ಬದುಕಿನ ನಡುವೆ ಹೊರಾಟಮಾಡುತ್ತಿರುವ ರಕ್ತದ ಅವಶ್ಯಕತೆ ಇರುವ ರೋಗಿಗಳ ಜೀವ ಉಳಿಸಿದಂತಾಗುತ್ತದೆ. ಎಲ್ಲ ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದ ದಾನವಾಗಿದ್ದು ಈ ಬಗ್ಗೆ ಯುವಶಕ್ತಿ ಹೆಚ್ಚಿನ ಗಮನಹರಿಸುವ ನಿಟ್ಟಿನಲ್ಲಿ ಜಾಗೃತರಾಗಿ ಹೆಜ್ಜೆ ಇಡಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಮಹಾಂತೇಶ್ ಚಿನ್ನಪ್ಪಗೌಡರ, ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದ ಸಂದಿಪ ದೆಶಪಾಂಡೆ , ಮಲ್ಲಿಕಾರ್ಜುನ್ ಮಾದಮ್ಮನವರ, ಧನಶ್ರೀ ದೆಸಾಯಿ ರಾಜ್ಯ ಯುವ ಮೋರ್ಚಾ ಕಾರ್ಯದರ್ಶಿ ಈರಣ್ಣ ಅಂಗಡಿ, ದಾದಾಗೌಡ ಬಿರಾದಾರ, ಮಹೇಶ್ ಮೊಹಿತೆ, ನಿತಿನ್ ಚೌಗಲೆ ಡಾ.ಸೋನಾಲಿ ಸರ್ನೋಬತ್, ಯಲ್ಲೇಶ್ ಕೊಲಕಾರ, ಡಾ.ನಯನಾ ಬಸ್ಮೆ, ಗುರು ಹಿರೇಮಠ, ಆನಂದ್ ಅತ್ತುಗೋಳ,ವಿಠ್ಠಲ ಸಾಯನ್ನವರ, ವೀರಭದ್ರ ಪೂಜಾರಿ, ನಾಗಪ್ಪ ಸಂಗೊಳ್ಳಿ, ಹಾಗೂ ಯುವ ಮೋರ್ಚಾ ಪದಾಧಿಕಾರಿಗಳು, ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ಪ್ರತೀಕ ಚಿಟಗಿ

WhatsApp Group Join Now
Telegram Group Join Now
- Advertisement -  - Advertisement -  - Advertisement - 
Share This Article
error: Content is protected !!