ಉತ್ತರ ಪ್ರದೇಶ : ಹಿಂದೂಗಳ ನೂರಾರು ವರ್ಷಗಳ ಹೋರಾಟದ ಫಲವಾಗಿ ರಾಮಜನ್ಮ ಭೂಮಿ ಅಯೋಧ್ಯೆಯಲ್ಲಿ 2024ರ ಆರಂಭದಲ್ಲಿ ಲೋಕಾರ್ಪಣೆಗೊಂಡ ರಾಮ ಮಂದಿರ, ಮೊದಲ ದಿನದಿಂದಲೂ ಒಂದಿಲ್ಲೊಂದು ದಾಖಲೆಗಳನ್ನು ನಿರ್ಮಿಸುತ್ತಲೇ ಬಂದಿದೆ. ಈಗ ಬಾಲರಾಮನ ಮಂದಿರ ಮತ್ತೊಂದು ದಾಖಲೆ ಸೃಷ್ಟಿಸಿದೆ.
ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರನ್ನು ಸೆಳೆಯುತ್ತಿದ್ದ ಖ್ಯಾತಿ ಆಗ್ರಾದ ತಾಜ್ ಮಹಲ್ ಸ್ಮಾರಕದ್ದಾಗಿತ್ತು. ಆದ್ರೆ 2024ರಲ್ಲಿ ಉತ್ತರ ಪ್ರದೇಶದ ಪವಿತ್ರ ನಗರವಾದ ಅಯೋಧ್ಯೆ ಪ್ರವಾಸೋದ್ಯಮದಲ್ಲಿ ಗಮನಾರ್ಹವಾದ ಸಾಧನೆ ಮಾಡಿದ್ದು, ಅಯೋಧ್ಯೆಗೆ ಹರಿದುಬರುವ ಪ್ರವಾಸಿಗರ ಸಂಖ್ಯೆಯಲ್ಲಿ ಆಗ್ರಾ ಮತ್ತು ಅದರ ತಾಜ್ ಮಹಲ್ ಅನ್ನು ಮೀರಿಸಿದೆ.
ರಾಮ ಮಂದಿರ ಲೋಕಾರ್ಪಣೆಗೊಂಡ ಕೇವಲ 10 ತಿಂಗಳಲ್ಲಿ ಅಯೋಧ್ಯೆಯ ಜನಪ್ರಿಯತೆ ಹೆಚ್ಚಾಗಿದ್ದು, ದೇಶ ವಿದೇಶಗಳಿಂದ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಮತ್ತು ಭಕ್ತರು ಹರಿದುಬಂದಿದ್ದಾರೆ. ಹೀಗಾಗಿ ಇದೀಗ ದೇಶ ನಂಬರ್ ಒನ್ ಪ್ರವಾಸಿ ತಾಣ ಎಂಬ ಗರಿ ಬಾಲ ರಾಮನ ಮುಡಿಗೇರಿದೆ.