ಕೊಡ್ಲಾ ನಾಡಕಚೇರಿ ಎದುರುಗಡೆ ಪ್ರತಿಭಟನೆ
ಸೇಡಂ: ತಾಲೂಕಿನ ಕೊಡ್ಲಾ ನಾಡಕಚೇರಿ ಎದುರುಗಡೆ ಬೆಳಿಗ್ಗೆ 10:00 ಗಂಟೆಗೆ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕ ಅಧ್ಯಕ್ಷರಾದ ಡಾಕ್ಟರ್ ರಾಮಚಂದ್ರ ಗುತ್ತೇದರವರ ನೇತೃತ್ವದಲ್ಲಿ ಉಪವಾಸ ಸತ್ಯಾಗ್ರ ಹಮ್ಮಿಕೊಳ್ಳಲಾಗಿತ್ತು.
ಕೊಡ್ಲಾ ಹಾಗೂ ಆಡಕಿ ನಾಡಕಚೇರಿಗಳಲ್ಲಿ ಆಧಾರ್ ಕೇಂದ್ರಗಳು ಪ್ರಾರಂಭಿಸಬೇಕು ಹಾಗೂ ಕೊಡ್ಲಾ ಯಾದಗಿರಿ ರಸ್ತೆ ತುಂಬಾ ಹದಗಟ್ಟಿದ್ದು ರಸ್ತೆ ಸುಧಾರಣೆ ಮಾಡಬೇಕು ಎಂದು ಬೆಳಗ್ಗೆ 10 ಗಂಟೆಯಿಂದ ಉಪವಾಸ ಸತ್ಯಾಗ್ರಹ ನಾಡಕಚೇರಿ ಎದುರುಗಡೆ ಕೂಡಲಾಗಿತ್ತು ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಮಲ್ಲಿಕಾರ್ಜುನ ಉಪತಹಶೀಲ್ದಾರರು ಬಂದು ಇಂದಿನಿಂದ ಆಧಾರ್ ಕೇಂದ್ರಗಳು ಪ್ರಾರಂಭಿಸಿ. ರಸ್ತೆಗಳ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಮಾತನಾಡಿ ಎಂಟು ದಿವಸದೊಳಗಾಗಿ ರಸ್ತೆಗಳು ಸುಧಾರಣೆ ಮಾಡುತ್ತೇವೆ ಎಂದು ಭರವಸೆ ನೀಡಿದರು.
ತದನಂತರ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾಧ್ಯಕ್ಷ ಡಾಕ್ಟರ್ ರಾಮಚಂದ್ರ ಗುತ್ತೇದಾರ್ ಅವರಿಗೆ ಎಳೆನೀರು ಕುಡಿಸುವುದರ ಮುಖಾಂತರ ಉಪವಾಸ ಸತ್ಯಾಗ್ರಹವನ್ನು ಕೈ ಬಿಡಲಾಯಿತು.
ಈ ಸಂದರ್ಭದಲ್ಲಿ ಚಂದ್ರಶೇಖರ್ ಪೂಜಾರಿ, ದೇವಕುಮಾರ್, ಶ್ರೀನಿವಾಸ ರೆಡ್ಡಿ, ಗುಂಡಪ್ಪ, ಭೀಮಯ್ಯ ಗುತ್ತೇದಾರ್, ಪ್ರವೀಣ್ ಕುಮಾರ್ ಕೊಡ್ಲಾ, ರಾಘವೇಂದ್ರ ಕಡಗಂಚಿ, ಚಂದ್ರಶೇಖರ್ ಮಡಿವಾಳ, ಮಹೇಶ್ ರೆಡ್ಡಿ ಜಾಗನಪಲ್ಲಿ, ಯಲ್ಲಾಲಿಂಗ, ಸೂಗಪ್ಪ ಬಳಗಾರ, ಬಸವರಾಜ್ ಹೊಸಮನಿ, ಚಂದು ಬೆನಕನಹಳ್ಳಿ, ಪವನ ಕುಲಕರಣಿ, ಮಹದೇವ ನೆರೆಟಿ, ಮಾರುತಿ ಬೋವಿ, ಸಾಬಣ್ಣ ಪೂಜಾರಿ, ರವಿ ಮದರಿ ಸೇರಿದಂತೆ ಕೂಡ್ಲ ಗ್ರಾಮದ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




