ಚಿಕ್ಕೋಡಿ : ಹಿರೇಕೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ 8ನೇ ವಾರ್ಡನ ರಮಾದೇವಿ ಕಲ್ಲಪ್ಪಾ ಮುಕುಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 30 ಸದಸ್ಯರ ಬಲ ಹೊಂದಿರುವ ಹಿರೇಕೋಡಿ ಗ್ರಾಪಂ 8ನೇ ವಾರ್ಡನ ಸದಸ್ಯೆಯಾಗಿರುವ ರಮಾದೇವಿ ಕಲ್ಲಪ್ಪಾ ಮುಕ್ಕುಂದ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯಲ್ಲಿ ಇವರು ಒಬ್ಬರೆ ನಾಮಪತ್ರ ಸಲ್ಲಿಸಿರುವ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿಯಾಗಿದ್ದ ಬಿಇಒ ಪ್ರಭಾವತಿ ಪಾಟೀಲ ಅವರು ಅಧ್ಯಕ್ಷೆಯಾಗಿ ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಣೆ ಮಾಡಿದರು. ಒಟ್ಟು 19 ಸದಸ್ಯರು ಇವರ ಪರವಾಗಿದ್ದರು.

ಅಧ್ಯಕ್ಷೆ ರಮಾದೇವಿ ಮುಕುಂದ ಮಾತನಾಡಿ, ಒಟ್ಟು 19 ಸದಸ್ಯರು ನಾನು ಅವಿರೋಧವಾಗಿ ಆಯ್ಕೆ ಮಾಡಲು ಸಹಕಾರ ನೀಡಿದ್ದಾರೆ ಎಂದರು. ಹಿರೇಕೋಡಿ ಗ್ರಾಮ ಪಂಚಾಯತಿಯಲ್ಲಿ ಮೂಲಭೂತ ಸೌಕರ್ಯ ಒದಗಿಸಲು ಪ್ರಾಮಾಣಿಕ ಕಾರ್ಯ ಮಾಡಲಾಗುವುದು ಎಂದರು.
ಗ್ರಾಪಂ ಸದಸ್ಯರಾದ ಅವದೂತ ಗುಡಿಮನಿ, ಫರನಾಜ ಪಟೇಲ, ಸುಭಾಷ ಚೌಗಲೆ, ಮಂಜುಳಾ ಇಂಗಳೆ, ಗಂಗಾಧರ ಕಮತೆ, ಅಣ್ಣಪ್ಪಾ ಘೋಸರವಾಡೆ, ಅರವಿಂದ ಚೌಗಲೆ, ಶಿವಲೀಲಾ ಕೋಳಿ, ರುದ್ರಪ್ಪಾ ಚೌಗಲೆ, ಸುರೇಶ ಚೌಗಲೆ, ಆಪ್ರೀನ ಪಟೇಲ್, ಅಶೋಕ ಪೂಜಾರಿ, ಅನಿತಾ ಬಣಗೆ, ಶಂಕರ ಟೊಣ್ಣೆ, ದತ್ತು ಗುದಗೆ, ದೀಪಾ ಟೊಣ್ಣೆ, ಬಾಬಾಸಾಹೇಬ ಗುಡಿಮನಿ, ಸುಕೇಶಿನಿ ಕಾಂಬಳೆ, ಮುಖಂಡರಾದ ಗಣೇಶ ಮೋಹಿತೆ, ರೋಹಿತ ಮುಕುಂದ ಇತರರು ಇದ್ದರು.
ವರದಿ: ರಾಜು ಮುಂಡೆ




