ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿವಿಧ ಊರುಗಳನ್ನು ನಗರಸಭೆ, ಪುರಸಭೆ ಪಟ್ಟಣ ಪಂಚಾಯಿತಿಗಳಾಗಿ ಮೇಲ್ದರ್ಜೆಗೇರಿಸಲು ನಿರ್ಣಯಕೈಗೊಳ್ಳಲಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲೆಯ ಹಾರೋಹಳ್ಳಿ ಪಟ್ಟಣ ಪಂಚಾಯತಿಯನ್ನು ಪುರಸಭೆಯಾಗಿ ಹಾಗೂ ಬೆಳಗಾವಿ ಜಿಲ್ಲೆಯ ರಾಮದುರ್ಗ ಪುರಸಭೆಯನ್ನು ನಗರಸಭೆಯಾಗಿ ಮೇಲ್ಬರ್ಗೇರಿಸಲು ನಿರ್ಧಾರ
ರಾಜ್ಯದ ಹಲವು ಗ್ರಾಮ ಪಂಚಾಯತಿಗಳು ಪಟ್ಟಣ ಪಂಚಾಯತಿಗಳಾಗಿ ಮೇಲ್ದರ್ಜೆಗೆ
ಬೀದರ್ ಜಿಲ್ಲೆಯ ಕಮಠಾಣಾ, ಮನ್ನಾ ಏಹಳ್ಳಿ, ಹುಲಸೂರು ಗ್ರಾಮ ಪಂಚಾಯತಿ
ಬೆಳಗಾವಿ ಜಿಲ್ಲೆಯ ಅಂಕಲಿ, ಸುರೇಬಾನ ಮತ್ತು ಮನಿಹಾಳ, ಕಟಕೋಳ ಗ್ರಾಮ ಪಂಚಾಯತಿ
ಮೈಸೂರು ಜಿಲ್ಲೆಯ ಸಾಲಿಗ್ರಾಮ ಗ್ರಾಮ ಪಂಚಾಯತಿ
ಬೆಂಗಳೂರು ಗ್ರಾಮಾಂತರ ಜಿಲ್ಲೆ ತ್ಯಾಮಗೊಂಡ್ಲು ಗ್ರಾಮ ಪಂಚಾಯತಿ
ಯಾದಗಿರಿ ಜಿಲ್ಲೆಯ ಸಗರ ಮತ್ತು ವಡಗೇರ ಗ್ರಾಮ ಪಂಚಾಯತಿ
ಉತ್ತರ ಕನ್ನಡ ಜಿಲ್ಲೆ ಮಾವಳ್ಳಿ ಗ್ರಾಮ ಪಂಚಾಯತಿ




