ಬಿಗ್‌ಬಾಸ್ ಖ್ಯಾತಿಯ ಕರ‍್ತಿಕ ಮಹೇಶ್ ನಟಿಸಿರುವ ‘ರಾಮರಸ’ ಚಿತ್ರದ ಚಿತ್ರೀಕರಣ ಮುಗಿದಿದ್ದು, ಜೂನ್ ವೇಳೆಗೆ ಈ ಚಿತ್ರವನ್ನು ತೆರೆಗೆ ತರುವ ಯೋಜನೆ ಇದೆ ಎಂದು ಚಿತ್ರ ತಂಡ ಹೇಳಿದೆ.
ಚಿತ್ರದ ಚಿತ್ರೀಕರಣದ ಕೆಲಸಗಳು ಪರ‍್ಣ ಮುಗಿದಿವೆ. ಈಗ ಪೋಸ್ಟ್ ಪ್ರೋಡಕ್ಸನ್ ಕೆಲಸಗಳು ಸಾಗಿದ್ದು, ನಮ್ಮ ನೆಲದ ಸೊಗಡಿನ ಕಥೆಯನ್ನು ಹೊಂದಿರುವ ಚಿತ್ರದಿಂದ ಬಹಳಷ್ಟು ನಿರೀಕ್ಷೆ ಇರಿಸಿಕೊಂಡಿದ್ದೇವೆ ಎನ್ನುತ್ತದೆ ಚಿತ್ರತಂಡ. ಸಸ್ಪೆನ್ಸ್ ಥ್ರಿಲರ್ ಜಾನರ್‌ನ ಚಿತ್ರಕ್ಕೆ ಬಿ.ಎಂ. ಗಿರಿರಾಜ್ ಆಕ್ಸನ್ ಕಟ್ ಹೇಳಿದ್ದಾರೆ..
ಜೂನ್ ವೇಳೆಗೆ ತೆರೆಗೆ ಬರಲಿದೆಯಂತೆ ‘ರಾಮರಸ’




