ವಿಜಯಪುರ :- ನಿಡುಗುಂದಿ ತಾಲೂಕಿನಲ್ಲಿ ನಾಗೇಶ್ ಮೊಪಗಾರ್ ಎಂಬ ಯುವಕ ಮೊಸಳೆಯನ್ನು ಕಂಡರೆ ಸಾಕು, ಆ ಮೊಸಳೆಯನ್ನ ಅಟ್ಟಾಡಿಸಿಕೊಂಡು ಯಾವುದೇ ಪ್ರಾಣ ಹಾನಿಯಾಗದಂತೆ ಮೊಸಳೆಗೂ ಸ್ವಲ್ಪವೂ ಗಾಯವಾಗದಂತೆ ಹಿಡಿದು ಆಲಮಟ್ಟಿ ಕೃಷ್ಣಾ ನದಿಗೆ ಬಿಡುವ ಸಾಹಸಿ ನಾಗೇಶ್.
ಆಲಮಟ್ಟಿಯ ಕೃಷ್ಣಾ ನದಿಯ ನೀರು ಕಡಿಮೆಯಾದಂತೆ ಮೊಸಳೆಗಳ ಅಟ್ಟಹಾಸ ಹೊಲಗದ್ದೆಗಳಿಗೆ ಆಹಾರವನ್ನು ಹುಡುಕುತ್ತಾ ನಾಡಿನತ್ತ ಮುಖ ಮಾಡುತ್ತವೆ,
ಇಂತಹ ಸಂದರ್ಭದಲ್ಲಿ ಯಾರದೇ ಹೊಲಗದ್ದೆಯಲ್ಲಿ ಕಂಡಂತ ಮೊಸಳೆಯನ್ನ ಸುರಕ್ಷಿತವಾಗಿ ಹಿಡಿದು ಮರಳಿ ನದಿಗೆ ಬಿಡುವಂತ ಕೆಲಸ ಕಾರ್ಯವನ್ನು ಅರಣ್ಯ ಅಧಿಕಾರಿಗಳ ಜೊತೆಗೂಡಿ ನಾಗೇಶನ ಸಾಹಸ.
ಅಷ್ಟೇ ಅಲ್ಲ ದೈರ್ಯವಂತ ಯುವಕ, ಮೊಸಳೆ ಎಷ್ಟೇ ದೊಡ್ಡದಿರಲಿ ಎಂತಹ ಜಾಗವೇ ಇರಲಿ ತನ್ನ ಪ್ರಾಣವನ್ನು ಲೆಕ್ಕಿಸದೆ ಅರಣ್ಯ ಅಧಿಕಾರಿಗಳ ಸಹಾಯದಿಂದ ಮೊಸಳೆಯನ್ನ ಹಿಡಿಯುತ್ತಾನೆ, ಅದಕ್ಕೆ ಗಾಯವಾಗದಂತೆ, ಹಗ್ಗದಿಂದ ಮುಖವನ್ನ ಕಟ್ಟುತ್ತಾನೆ, ಅದರ ಮೇಲೆ ಕೂಡುತ್ತಾನೆ, ಅಪಾಯವಿಲ್ಲದೆ ಉಪಾಯದಿಂದ ಮೊಸಳೆಯನ್ನು ನದಿಯಲ್ಲಿ ಬಿಡುತ್ತಾನೆ.
ಅಂತಹದೇ ಪ್ರಕರಣ ಮತ್ತೊಂದು ಹೊಲದಲ್ಲಿ ಮೊಸಳೆ ಎರಡು ಕುರಿಗಳನ್ನು ಬಲಿ ಪಡೆದುಕೊಂಡಿತ್ತು, ಪೊದೆ ಒಂದರಲ್ಲಿ ಅಡಗಿಕೊಂಡ ಮೊಸಳೆಯನ್ನು ಹಿಡಿಯಲು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ಬಂದಾಗ,ನಿಡಗುಂದಿ ನಿವಾಸಿಯಾದ ನಾಗೇಶ್ ಮೊಪಗಾರ ಯುವಕ ಸಾರ್ವಜನಿಕರು ಅರಣ್ಯ ಅಧಿಕಾರಿಗಳ ಜೊತೆಗೂಡಿ ಮೊಸಳೆಯನ್ನು ಹಿಡಿಯಲು ಯಶಸ್ವಿಯಾಗಲು ಕಾರಣವಾಯಿತು.
ವರದಿ : ಅಲಿ ಮಕಾನದಾರ.