Ad imageAd image

ಸ್ವಂತ ಖರ್ಚಿನಲ್ಲಿ ಪತ್ರಾಸ ಶೇಡನಲ್ಲಿ ಅಂಗನವಾಡಿ ನಿರ್ಮಿಸಿದ  ರೈತ ರಮೇಶ ಹರಿ ಪಾಟೀಲ

Bharath Vaibhav
ಸ್ವಂತ ಖರ್ಚಿನಲ್ಲಿ ಪತ್ರಾಸ ಶೇಡನಲ್ಲಿ ಅಂಗನವಾಡಿ ನಿರ್ಮಿಸಿದ  ರೈತ ರಮೇಶ ಹರಿ ಪಾಟೀಲ
WhatsApp Group Join Now
Telegram Group Join Now

ಅಥಣಿ: ಸರಕಾರಿ ಶಾಲೆಗಳು ಎಂದರೇ ಮೂಗು ಮುರಿದು ಕೋಳುವ ಇಂತಹ ದಿನಮಾನದಲ್ಲಿ ಇಲ್ಲೋಬ್ಬ ದಾನಿ ತನ್ನ ಸ್ವಂತ ಜಾಗದಲ್ಲಿ ,ಸ್ವಂತ ಖರ್ಚಿನಲ್ಲಿ ಪತ್ರಾಸ ನಿಂದ ಅಂಗನವಾಡಿ ಶೇಡ ನಿರ್ಮಿಸಿ ಚಿಕ್ಕ ಮಕ್ಕಳಿಗೆ ಶಿಕ್ಷಣ ಒದಗಿಸಲು ಇತರರಿಗೆ ಮಾದರಿಯಾಗಿದಾನೆ.

ಅಥಣಿ ತಾಲೂಕಿನ ತಂಗಡಿ ಎಂಬ ಪುಟ್ಟ ಗ್ರಾಮದ ಶಿವಾಜಿ ನಗರದ ಬಾರಿಗಡ್ಡಿ ಎಂಬ ತೋಟ ಅಲ್ಲಿಯ ಸಣ್ಣ ರೈತನೋಬ್ಬ ಸರಕಾರ ಮಾಡಬೇಕಾಗಿದ ಕೆಲಸವನ್ನು ತಾನು ಒಬ್ಬನೇ ಮಾಡಿದಾನೆ.
ಇತನ ಹೆಸರು ರಮೇಶ ಹರಿ ಪಾಟೀಲ ಅಂತಾ ಸಣ್ಣ ರೈತ ಆದರೆ ದೊಡ್ಡ ಮನಸ್ಸು ಅದೇನ್ನು ಅಂತಿರಾ ತಮ್ಮ ಗ್ರಾಮದ ತೋಟದಲ್ಲಿರುವ ಅಂಗನವಾಡಿ ಶಾಲೆ ಇಗಲ್ಲೋ ಆಗಲ್ಲೊ ಬಿಳುವ ಹಂತದಲ್ಲಿರುವ ಅಂಗನವಾಡಿಯಲ್ಲಿ ಚಿಕ್ಕ ಮಕ್ಕಳು ಹೇಗೆ ಕಲಿಯುತ್ತೇವೆ ಎಂದು ಮನಗಂಡು ತನ್ನ ಜಮೀನಿನಲ್ಲಿ ಜಾಗ ನೀಡಿದಲ್ಲದೆ ಸ್ವಂತ ಖರ್ಚಿನಿಂದ ಪತ್ರಾಸ ಶೇಡನಲ್ಲಿ ಅಂಗನವಾಡಿ ನಿರ್ಮಿಸಿ ಸಾರ್ವಜನಿಕ ಮಚ್ಚುಗೆ ಪಾತ್ರನಾಗಿದಾನೆ.
ಇದು ಅಲ್ಲದೆ ತಾಲ್ಲೂಕು ಶಿಶು ಅಭಿವೃದ್ಧಿ ಇಲಾಖೆಯ ರೇಣುಕಾ ಹೊಸಮನಿಯವರನ್ನು ಕರೆಯಿಸಿ ರೆಬ್ಬನ ಕಟ ಮಾಡುವ ಮೂಲಕ ಉದ್ಘಾಟಿಸಿದ ಘಟನೆ ಯುಗಾದಿ ಪಾಡ್ಯದಿನದಂದು ನಡೆದಿದೆ.

ಅಂಗನವಾಡಿ ನಿರ್ಮಿಸಿ ಸಹಕಾರ ನೀಡಿದ ತಮ್ಮಲರಿಗು ತುಂಬು ಹೃದಯದ ಧನ್ಯವಾದಗಳು ಇದೇ ರೀತಿ ನಮ್ಮಗೆ ಸಹಕಾರ ನೀಡಿ ಎಂದ ಅವರು ಸರಕಾರ ನಿಮ್ಮ ಸೇವೆಗೆ ನಮ್ಮನ್ನು ನೇಮಿಸಿದ್ದು ಸಹಕಾರ ಕೊಡಬೇಕು ತಪ್ಪಾದರೆ ತಿಳಿಸಿ ಹೇಳಬೇಕು ಚಿಕ್ಕ.ಮಕ್ಕಳಿಗೆ ಸಿಗುವ ಆಹಾರ ಪದಾರ್ಥಗಳನ್ನು ವವ್ಯಸ್ಥಿತವಾಗಿ ಬೇಯಿಸಿ ನೀಡಬೇಕು.ಗರ್ಬಿಣಿ ಬಾಣಂತಿಯರಿಗೆ ಸರಕಾರದಿಂದ ಸಿಗುವ ಸವಲತ್ತುಗಳನ್ನು ಕಾರ್ಯಕತೆಯರು ಒದಗಿಸಬೇಕು .

ಮಕ್ಕಳ ತಿವೃ ನಿಗಾವಹಿಸಬೇಕು ದಿನಚರಿಯಂತೆ ಆಹಾರವನ್ನು ಒದಗಿಸಬೇಕು ಸಭೆಗೆ ಹೋಗುವದಿದರೆ ಬೇರೆ ಯವರಿಗೆ ಮಕ್ಕಳನ್ನು ನೋಡಿಕೊಳ್ಳಲು ತಿಳಿಸಬೇಕು ಎಂದ ಅವರು ಅಂಗನವಾಡಿಗೆ ತಮ್ಮ ಮಕ್ಕಳನ್ನು ಕಳುಹಿಸಿ ಸರಕಾರ ಸೌಲಭ್ಯ ಪಡೆದುಕೊಳಿ ಮತ್ತು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳನ್ನು ತೊಂದರೆಯಾಗದಂತೆ ನೋಡಿಕೋಳಬೇಕು, ಮತ್ತು ದೂರದಲ್ಲಿರುವ ಜನರು ತಮ್ಮ ಮಕ್ಕಳನ್ನು ತಮ್ಮ ಸ್ವಂತ ವಾಹನದಲ್ಲಿ ತಂದು ಬಿಡಬೇಕು,ಗ್ರಾಮಪಂಚಾಯತದವರು ಅಂಗನವಾಡಿಗೆ ಮೂಲಭೂತ ಸೌಕರ್ಯ ಒದಗಿಸಬೇಕು ಎಂದು ಮನವಿ ಮಾಡಿದರು.

ಗ್ರಾಮದ ಎಲ್ಲ ಪ್ರಮುಖರನ್ನು ಕರೆಯಿರಸಿ ಅಂಗನವಾಡಿಯ ಸುತ್ತಲೂ ಗ್ರಿನ್ ಶೇಡ ನಿರ್ಮಿಸಿ ವಿದ್ಯುತ್ ಸಂಪರ್ಕ, ಕುಡಿಯುವ ನೀರಿನ ಸೌಕರ್ಯ,ಹಂದರ ಹಾಕಿಸಿ ಅಂಗನವಾಡಿ ಶಾಲೆಯನ್ನು ಮದುವಣಗಿತಿಯಂತೆ ಶೃಂಗಾರಿಸಿದರು. ಅಕ್ಷರದ ಮಾತೆ ಶಾರದಾದೇವಿ ಭಾವ ಚಿತ್ರಕ್ಕೆ ಸುಮಂಗಲಯರು ಆರತಿ,ಪೂಜೆ ಸಲಿಸಿದರು.

ಸಂದರ್ಭದಲ್ಲಿ ಮೇಲ್ವಿಚಾರಕಿ ಎಸ್ ವಾಯ್ ಗೊಲ್ಲರ, ಗ್ರಾಪಂ ಅಭಿವೃದ್ಧಿ ಅಧಿಕಾರಿ ಪಿ ಎಂ ಮಾಳಿ ಗ್ರಾಮಪಂಚಾಯತ ಅಧ್ಯಕ್ಷ ಅನೀಲ ತಳವಾರ, ಗ್ರಾಪಂ ಸದಸ್ಯ ಚೇತನ ಗಾಯಕವಾಡ , ಶ್ರೀಕಾಂತ ಪಾಟೀಲ, ಮಹಾದೇವ ಪಾಟೀಲ, ಪೊಪಟ ಮೋರೆ,ಬಾಬಾಸಾಬ್ ಮೋರೆ, ಬಾಳಕೃಷ್ಣ ಪಾಟೀಲ, ಮಲ್ಲಪ್ಪಾ ನಾಯಿಕ,ವೈಶಾಲಿ ಪಾಟೀಲ, ಅನೀತಾ ಪಾಟೀಲ, ಸವೀತಾ ಗಾಯಕವಾಡ ,ಅಂಗನವಾಡಿ ಶಿಕ್ಷಕಿ ಜೆ ಎನ್ ಇನಾಮದಾರ ಸೇರಿದಂತೆ ಇತರರು ಇದ್ದರು.

ವರದಿ: ಮುರಗೇಶ ಗಸ್ತಿ

WhatsApp Group Join Now
Telegram Group Join Now
Share This Article
error: Content is protected !!