Ad imageAd image

ಸರ್ಕಾರಿ ಸೇವೆಯಲ್ಲಿ ಸಾರ್ಥಕ ಸೇವೆಸಲ್ಲಿಸಿ ಅರ್ಥಪೂರ್ಣವಾಗಿ ನಿವೃತ್ತಿಗೊಂಡ ಇಂಜಿನಿಯರ್ ರಮೇಶ್ ಹೆಡಗೆ.

Bharath Vaibhav
ಸರ್ಕಾರಿ ಸೇವೆಯಲ್ಲಿ ಸಾರ್ಥಕ ಸೇವೆಸಲ್ಲಿಸಿ ಅರ್ಥಪೂರ್ಣವಾಗಿ ನಿವೃತ್ತಿಗೊಂಡ ಇಂಜಿನಿಯರ್ ರಮೇಶ್ ಹೆಡಗೆ.
WhatsApp Group Join Now
Telegram Group Join Now

ಬೆಳಗಾವಿ : ಉಪ ವಿಭಾಗದ ಗ್ರಾಮೀಣ ಕುಡಿಯುವ ನೀರು ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಹಾಗೂ ಬೆಳಗಾವಿ ತಾಲ್ಲೂಕು ಪಂಚಾಯಿತಿ Eo ಆಗಿದ್ದ ರಮೇಶ್ ಹೆಡಗೆ ತಮ್ಮ ವಯೋ ನಿವೃತ್ತಿ ನಿಮಿತ್ಯ ನಿನ್ನೆ ತಾಲ್ಲೂಕು ಸಬಾಭವನದಲ್ಲಿ ಎಲ್ಲಾ ಅಧಿಕಾರಿಗಳು, ಪಿ.ಡಿ.ಒಗಳು, ಸರ್ವ ಸಿಬ್ಬಂದಿಗಳು, ಕುಟುಂಬ ವರ್ಗದವರ ಸಮ್ಮುಖದಲ್ಲಿ ಅದ್ದೂರಿಯಾಗಿ ಸನ್ಮಾನ, ಸತ್ಕಾರ ಸ್ವೀಕರಿಸಿ ನಿವೃತ್ತಿಯಾದರು. ಈ ಸಂದರ್ಭದಲ್ಲಿ ನಿವೃತ್ತಿಯಾದ ಕಾರ್ಯದರ್ಶಿ ದುರ್ಗಪ್ಪ ತಹಸೀಲ್ದಾರ್ ಅವರನ್ನು ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಬಸವರಾಜು ಹೆಗ್ಗನಾಯಕ್, ಡಿ.ಎಂ ಬನ್ನೂರು, ಸಹಾಯಕ ನಿರ್ದೇಶಕ ಬಸವರಾಜು ಕಡೆಮಣಿ, aee ಬಸವರಾಜು ಹಾಲಗಿ ಸೇರಿದಂತೆ ಎಲ್ಲಾ ಪಿ.ಡಿ. ಓ ಗಳು, ಸಿಬ್ಬಂದಿಗಳು, ತಾಲ್ಲೂಕು ಪಂಚಾಯಿತಿ ಸಿಬ್ಬಂದಿಗಳು ಹಾಗೂ ಕುಟುಂಬವರ್ಗದವರು ಉಪ ಸ್ಥಿತರಿದ್ದರು. ಈ ಸಂದರ್ಭದಲ್ಲಿ ತಮ್ಮ ಸೇವಾ ಅವಧಿಯಲ್ಲಿ ಆದ ಘಟನೆಗಳ ಬಗ್ಗೆ ರಮೇಶ್ ಹೆಡಗೆ ಮೆಲುಕು ಹಾಕಿದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯದರ್ಶಿ ಬಸವರಾಜು ಹೆಗ್ಗನಾಯಕ್ ರವರು ಸ್ಫೂರ್ತಿಯ ಮಾತುಗಳನ್ನು ಆಡಿದರು. ಒಟ್ಟಾರೆ ಇಂಜಿನಿಯರ್ ರಮೇಶ್ ಹೆಡಗೆಯವರು ತಮ್ಮ ಸರ್ಕಾರಿ ಕೆಲಸದಿಂದ ಸಾರ್ಥಕ ಸೇವೆ ಸಲ್ಲಿಸಿ ಅದ್ದೂರಿಯಾಗಿ ಅರ್ಥಪೂರ್ಣವಾಗಿ ನಿವೃತ್ತಿಗೊಂಡರು.

ವರದಿ : ಬಸವರಾಜು. 

WhatsApp Group Join Now
Telegram Group Join Now
Share This Article
error: Content is protected !!