ಪ್ರಯಾಗ್ರಾಜ್ : ಮಹಾಕುಂಭಮೇಳದಲ್ಲಿ ಕರ್ನಾಟಕದ ಗಣ್ಯರು ಪುಣ್ಯಸ್ನಾನ ಮಾಡುವುದು ಮುಂದುವರಿದಿದೆ. ಗೋಕಾಕ ಬಿಜೆಪಿ ಶಾಸಕ ಮತ್ತು ರಾಜ್ಯ ಬಿಜೆಪಿ ಘಟಕದಲ್ಲಿ ಬಸನಗೌಡ ಪಾಟೀಲ್ ಯತ್ನಾಳ್ ಬಣದಲ್ಲಿ ಗುರುತಿಸಿಕೊಂಡಿರುವ ರಮೇಶ್ ಜಾರಕಿಹೊಳಿಯವರು ಸಹ ಪ್ರಯಾಗ್ರಾಜ್ ತೆರಳಿ ಪುಣ್ಯಸ್ನಾನ ಮಾಡಿದರು.
ಅವರೊಂದಿಗೆ ಕೆಲ ಸ್ನೇಹಿತರು ಸಹ ಇದ್ದರು. ಮೊನ್ನೆಯಷ್ಟೇ ಕರ್ನಾಟಕದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಪತ್ನಿ ಸಮೇತರಾಗಿ ಪ್ರಯಾಗ್ರಾಜ್ಗೆ ಅಗಮಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದರು.