ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ಕಚೇರಿ ನಿರ್ಮಣದ ಕ್ರೆಡಿಟ್ ಫೈಟ್ ಜೋರಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಮಾತಿನ ಜಟಾಪಟಿ ಆರಂಭವಾಗಿದೆ.
ಬೆಳಗಾವಿಯಲ್ಲಿ ಕಾಂಗ್ರೆಸ್ ಭವನ ಆಗಲು ಲಕ್ಷ್ಮೀ ಹೆಬ್ಬಾಳ್ಕರ್ ಕಾರಣ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದರು ಇದಕ್ಕೆ ಮಧ್ಯಪ್ರವೇಶ ಮಾಡಿದ್ದ ಸತೀಶ್ ಜಾರಕಿಹೊಳಿ ಸ್ಪಷ್ಟನೆ ನೀಡಿದ್ದರು.
ಸತೀಶ್ ಜಾರಕಿಹೊಳಿಗೆ ವಿರೋಧ ಮಾಡುವ ಶಕ್ತಿ ಕೊಟ್ಟಿದ್ದಕ್ಕೆ ಧನ್ಯವಾದ ಹೇಳುತ್ತೇನೆ ಎಂದು ಬಿಜೆಪಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಮೇಶ್ ಜಾರಕಿಹೊಳಿ, ಅಂದು ನಾನು ಕಾಂಗ್ರೆಸ್ ಶಾಸಕನಾಗಿದ್ದಾಗ ಕಾಂಗ್ರೆಸ್ ಹವನದ ಕಟ್ಟಡಕ್ಕೆ ಜಾಗಬಿಟ್ಟುಕೊಡುವಂತೆ ಕನ್ವಿನ್ಸ್ ಮಡಿಸಿದ್ದೆ. ಬಳಿಕ ಕ್ಯಾಬಿನೆಟ್ ನಲ್ಲಿ ಆ ಜಾಗ ಮಂಜೂರು ಮಾಡಿಸಿದ್ದೆ.
ಎರಡು ಭಾಗದ ಕಂತ್ ಮೂಲಕ ಜಾಗದ ಮಾಲೀಕರಿಗೆ ಹಣ ನೀಡಿದ್ವಿ. ನಾನೇ ಸ್ವಂತವಾಗಿ 27 ಲಕ್ಷ ರೂಪಾಯಿ ಹಣವನ್ನು ಮೊದಲ ಕಂತಿನಲ್ಲಿ ನೀಡಿದ್ದೆ. ಜಾಗ ಖರೀದಿ ಬಳಿಕ ಕಟ್ಟಡ ನೆನೆಗುದಿಗೆ ಬಿತ್ತು. ನಾನು ಮಂತ್ರಿಯಾದ ಬಳಿಕ ಒಂದು ಕೋಟೊ ಹಣ ಕೈಯಿಂದ ಹಾಕಿದ್ದೇನೆ. 1 ಕೋಟಿ 27 ಲಕ್ಷ ಹಣವನ್ನು ಕಂಗ್ರೆಸ್ ಕಚೇರಿ ಕಟ್ಟಲು ನೀಡಿದ್ದೇನೆ ಎಂದರು.
ಬಳಿಕ ಕಚೇರಿ ನಿರ್ಮಾಣಕ್ಕೆ ಸತೀಶ್ ಜಾರಕಿಹೊಳಿ ಕೆಲಸ ಮಾಡಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಎಷ್ಟು ಹಣ ಕೊಟ್ಟಿದ್ದರು ನನಗೆ ಗೊತ್ತಿಲ್ಲ. ಕಾಂಗ್ರೆಸ್ ಕಚೇರಿ ನಿರ್ಮಾಣದಲ್ಲಿ ಗೋಲ್ ಮಾಲ್ ನಡೆದಿದೆ ಎಂದರು.
ಇನ್ನು ಅಂದು ನಾನು ಜಿಲ್ಲಾ ಉಸ್ತುವಾರಿಯಾಗಿದ್ದಾಗ ಡಿ.ಕೆ.ಶಿವಕುಮಾರ್ ನನ್ನು ಬೆಳಗಾವಿ ಪ್ರವೇಶಿಸಲು ಬಿಟ್ಟಿರಲಿಲ್ಲ. ಅವರಿಗೆ ಬೆಳಗಾವಿಗೆ ಬರಲು ಅವಕಾಶ ನೀಡಿರಲಿಲ್ಲ ಎಂದು ವಾಗ್ದಾಳಿ ನಡೆಸಿದರು.