Ad imageAd image

ಜೀವನದ ಮೌಲ್ಯಗಳನ್ನು,ಬದುಕಿನ ಸತ್ಯವನ್ನು ಮಾನವ ಹೃದಯಕ್ಕೆ ತಟ್ಟುವಂತೆ ಆಗಬೇಕು ರಮೇಶ್ ಸಿಂದಗಿ.

Bharath Vaibhav
ಜೀವನದ ಮೌಲ್ಯಗಳನ್ನು,ಬದುಕಿನ ಸತ್ಯವನ್ನು ಮಾನವ ಹೃದಯಕ್ಕೆ ತಟ್ಟುವಂತೆ ಆಗಬೇಕು ರಮೇಶ್ ಸಿಂದಗಿ.
WhatsApp Group Join Now
Telegram Group Join Now

ಅಥಣಿ :- ಜೀವನದ ಮೌಲ್ಯಗಳನ್ನು ಮತ್ತು ಬದುಕಿನ ಸತ್ಯವನ್ನು ಮಾನವ ಹೃದಯಕ್ಕೆ ತಟ್ಟುವಂತೆ ರಾಮಾಯಣ ಕೃತಿಯನ್ನು ರಚಿಸಿ ಭಾರತಕ್ಕೆ ಮತ್ತು ಜಗತ್ತಿಗೆ ಕೊಡುಗೆಯಾಗಿ ನೀಡಿದವರು ಮಹರ್ಷಿ ವಾಲ್ಮೀಕಿಯವರು. ಮಾನವನ ಒಳಿತಿಗಾಗಿ ಚಿಂತಿಸುವ ಇಂತಹ ದಾರ್ಶನಿಕರ ಜಯಂತಿಯನ್ನು ಕೇವಲ ಒಂದು ಸಮುದಾಯದವರು ಮಾತ್ರ ಆಚರಿಸದೆ ಎಲ್ಲಾ ಸಮುದಾಯದವರು ಆಚರಿಸುವಂತಾಗಬೇಕು ಎಂದು ವಾಲ್ಮೀಕಿ ಸಮುದಾಯದ ಮುಖಂಡ ರಮೇಶ್ ಸಿಂದಗಿ ಹೇಳಿದರು.
ಅವರು ಪಟ್ಟಣದ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಮಾನವೀಯತೆಯೇ ಧರ್ಮ ಎಂದು ಪ್ರತಿಪಾದಿಸಿದ ಮಹಾನ್ ದಾರ್ಶನಿಕ ಮಹರ್ಷಿ ವಾಲ್ಮೀಕಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದರು.

ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾತನಾಡಿ ಮಾನವೀಯತೆ ಮೌಲ್ಯಗಳು ಹರಿಕಾರ ಶ್ರೀ ಮಹರ್ಷಿ ವಾಲ್ಮೀಕಿಯ ವಿಚಾರ ದಾರಿಗಳು ಇಂದಿಗೂ ನಮ್ಮೆಲ್ಲರಿಗೆ ನೀಡಿದ ಕೊಡುಗೆ ಅಮರ ಅವರ ಸಂದೇಶ ಇಡೀ ಮಾನವ ಜನಾಂಗಕ್ಕೆ ಬೆಳಕಾಗಿದೆ ಎಂದು ಹೇಳಿದರು.ಈ ವೇಳೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಾವಸಾಬ ಐಹೊಳೆ ಮಾತನಾಡಿ ನಾಡಿಗೆ ಮಹಾನ್ ರಾಮಾಯಣ ಗ್ರಂಥ ನೀಡಿದ ಮಹನೀಯರಾಗಿದ್ದಾರೆ. ದೇಶದಲ್ಲಿ ಮಹರ್ಷಿ ವಾಲ್ಮೀಕಿಯವರ ತತ್ವ ಸಿದ್ದಾಂತ ಬೋಧನೆಗಳು ಅನುಕರಣೀಯ ಎಂದು ಹೇಳಿದರು .

ನಂತರ ಸಿದ್ದಾರ್ಥ್ಹ ಸಿಂಗೆ ಅವರು ಮಾತನಾಡಿ ಶ್ರೀ ಮಹರ್ಷಿ ವಾಲ್ಮೀಕಿಯವರ ತತ್ವ ಸಂದೇಶಗಳನ್ನು, ಅವರ ವಿಚಾರಧಾರೆಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ನಿಮ್ಮ ಮಕ್ಕಳಿಗೆ ಉತ್ತಮ ಮಟ್ಟದ ಜೀವನ ರೂಪಿಸಲು ಅವರಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು. ಯಾವ ಮಕ್ಕಳೂ ಶಿಕ್ಷಣದಿಂದ ವಂಚಿತರಾಗಬಾರದು. ಸಮಾಜದಲ್ಲಿ ನಿಮ್ಮ ಮಕ್ಕಳು ಮುಂದೆ ಬರಬೇಕು, ಏನಾದರೂ ಸಾಧನೆ ಮಾಡಬೇಕು ಅಂದರೆ, ಅದಕ್ಕೆ ಶಿಕ್ಷಣವೇ ದೊಡ್ಡ ಅಸ್ತ್ರವಾಗಿದೆ. ಆದ್ದರಿಂದ ಎಲ್ಲ ಮಕ್ಕಳಿಗೂ ಶಿಕ್ಷಣ ನೀಡಬೇಕು. ಮಹಾತ್ಮರ ಜಯಂತಿ, ಧಾರ್ಮಿಕ ಕಾರ್ಯಕ್ರಮಗಳನ್ನು, ಉತ್ಸವಗಳನ್ನು ಎಲ್ಲ ಧರ್ಮದವರೂ ಆಚರಿಸಬೇಕು. ಇದರಿಂದ ಸಮಾಜದಲ್ಲಿ ಸಾಮಾಜಿಕ ಹೊಸ ಪರಿವರ್ತನೆ ಸಾಧ್ಯವಾಗಲಿದೆ ಎಂದರು.

ಈ ಕಾರ್ಯಕ್ರಮದಲ್ಲಿ ತಾಲೂಕ ದಂಡಾಧಿಕಾರಿಗಳು ಸಿದ್ದರಾಯ್ ಬೋಸಗಿ ಪುರಸಭೆ ಅಧ್ಯಕ್ಷೆ ಶ್ರೀಮತಿ ಶಿವಲೀಲಾ ಸ. ಬುಟಾಳಿ, ಉಪಾಧ್ಯಕ್ಷೆ ಶ್ರೀಮತಿ ಭುವನೇಶ್ವರಿ ಬೀ. ಯಕ್ಕಂಚಿ. ವಿಲೀನರಾಜ್ ಯಲಮಲೇ ಅಸ್ಲ0 ನಾಲ್ಬಂದ್ ರಾಜೇಂದ್ರ ಐಹೊಳೆ. ಶಶಿ ಸಾಳವೆ ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಬಸವರಾಜ ಎಸ್.‌ ಯಾದವಾಡ ಎ.ಇ.ಇ. ಈರಣ್ಣ ವಾಲಿ, ಸಿಡಿಪಿಒ ಇಲಾಖೆಯ ಅಧಿಕಾರಿ ಶ್ರೀಮತಿ ಹೊಸಮನಿ ಸಮಾಜ ಕಲ್ಯಾಣ ಇಲಾಖೆಯ ಚಂದ್ರಕಾಂತ್ ಕಾಂಬಳೆ ಹಾಗೂ ಸಮುದಾಯದ ಮುಖಂಡರು ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

ವರದಿ:- ರಾಜು ವಾಘಮಾರೆ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!