ಸಂಕೇಶ್ವರ: ಎಲ್ಲರ ನೆಚ್ಚಿನ ಯುವಕರಿಗೆ ಯುವ ನಾಯಕ, ವಿದ್ಯಾರ್ಥಿಗಳಿಗೆ ಜ್ಞಾನಾರ್ಜಕ, ಬಡ ಬಲ್ಲವರ ಪಾಲಿನ ಜನ ಸೇವಕ ಹಾಗೂ ನಮ್ಮ ನಿಮ್ಮೆಲ್ಲರ ಜನಪ್ರಿಯ ವಿ. ಜೆ. ಫೌಂಡೇಶನ್ ಮತ್ತು ಸೆಟಲೈಟ್ ಕೊಚಿಂಗ್ ಸೆಂಟರನ ಸಂಸ್ಥಾಪಕರು ಅಧ್ಯಕ್ಷರಾದ ಶ್ರೀ ವಿಶ್ವನಾಥ ಕೆ.ವಾಜಂತ್ರಿಯವರು ತಮ್ಮ ಹುಟ್ಟು ಹಬ್ಬವನ್ನು ಅತಿ ವಿಜೃಂಭಣೆಯಿಂದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಸ್ನೇಹಿತರೊಂದಿಗೆ ಆಚರಿಸಿಕೊಂಡರು.
ಜ್ಞಾನದ ಸಂಗ್ರಹಕ್ಕೆ ಹಂಬಲಿಸುವ ಇವರು ತಮ್ಮ ಹುಟ್ಟು ಹಬ್ಬದ ನಿಮಿತ್ತವಾಗಿ ರಂಗು ರಂಗಿನ ರಂಗೋಲಿ ಹಾಕುವ ರಂಗೋಲಿ ಕಲಾವಿದರಿಗೆ ಇತ್ತಿಚಿಗೆ ಡಿ. 01 ರವಿವಾರದಂದು ಭವ್ಯ ರಂಗೋಲಿ ಸ್ಪರ್ಧೆಯನ್ನು ಆಯೋಜಿಸಿದ್ದರು.
ಬಣ್ಣಿನ ರಂಗೋಲಿಯಲ್ಲಿ ಮಿಂದೆಳಲು ಒಟ್ಟು 30 ಜನ ಯುವಕ ಯುವತಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ಗಣ್ಯರ ಮನ ತಲುಪುವ ಹಾಗೆ ಚಂದುಳಿಯರು ರಂಗೋಲಿಯನ್ನು ಹಾಕಿ ರಂಜಿಸಿದರು. ರಂಗೋಲಿ ಸ್ಪರ್ಧೆಯ ಫಲಿತಾಂಶ ತಿರ್ಪುಗಾರರಾಗಿ ಭೀಮಶಿ ಕುಂಬಾರ ಚಿತ್ರಕಲಾ ಶಿಕ್ಷಕರು ಹಾಗೂ ಸುಂದರ ರಂಗೋಲಿಯನ್ನು ಆಯ್ಕೆ ಮಾಡಿದರು. ರಂಗೋಲಿ ಸ್ಪರ್ಧೆಯಲ್ಲಿ ಪೂರ್ಣಿಮಾ ಬುಗಡೆಯವರು ಪ್ರಥಮ ಸ್ಥಾನ ಪಡೆದು, ಪ್ರೀಯಂಕಾ ಮಿಶ್ರಿಕೋಟಿಯವರು ದ್ವಿತೀಯ ಸ್ಥಾನ ಗಿಟ್ಟಿಸಿಕೊಂಡು, ಸಾಕ್ಷಿ ಕಿಲ್ಲೆಕರರವರು ತೃತೀಯ ಸ್ಥಾನ ಪಡೆದು ಈ ಸ್ಪರ್ಧೆಗೆ ಮೆರುಗು ನೀಡಿದರು. ಪ್ರವೀಣ್ ಫಾಡಿ ಹಾಗೂ ಅಕ್ಷತಾರವರು ಸಮಾಧಾನಕರ ಬಹುಮಾನಕ್ಕೆ ತೃಪ್ತಿ ಪಟ್ಟರು. ಪ್ರಶಸ್ತಿಯನ್ನು ಮುಡಿಗೆರಿಸಿಕೊಂಡ ಎಲ್ಲ ಸ್ಪರ್ಧಾರ್ಥಿಗಳಿಗೆ ಚಿಕ್ಕೋಡಿ ಲೋಕಸಭೆಯ ಪಕ್ಷೇತರ ಅಭ್ಯರ್ಥಿಯಾದ ಧೀಮಂತ ನಾಯಕ ವಿಶ್ವನಾಥ ಕೆ. ವಾಜಂತ್ರಿಯವರು ಬಹುಮಾನ ಹಾಗೂ ಭಾಗವಹಿಸಿದ ಎಲ್ಲ ಸ್ಪರ್ಧಾರ್ಥಿಗಳಿಗೆ ಪ್ರಶಸ್ತಿ ಪತ್ರ ಪ್ರದಾನ ಮಾಡಿ ಅಭಿನಂದಿಸಿ ಹುಟ್ಟು ಹಬ್ಬ ಜೊತೆಗೆ ಸ್ಪರ್ಧೆಯನ್ನು ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ: ರೇವತಿ ಅಂಬಲಿ, ಆರತಿ ಜಾದವ್, ಉಪನ್ಯಾಸಕರಾದ ವಿಜಯಲಕ್ಷ್ಮಿ ಮಿರ್ಜಿ, ಮತ್ತು ಸಿ. ಎಸ್. ಪಾಟಿಲ್, ಪ್ರೀಯಂಕಾ ನಿಂಗಾಯಿ, ಶಿವಮ್ ಸಾಫ್ಟವೇರ್ ಕಂಪನಿಯ ಅಧ್ಯಕ್ಷರು ಸುನಿಲ್ ಸುತಾರ ಪ್ರಮುಖ ಉಪಸ್ಥಿತರಿದ್ದರು. ಹುಟ್ಟು ಹಬ್ಬದ ಪ್ರಯುಕ್ತ ಹಮ್ಮಿಕೊಂಡ ಸಂಗೀತ ಸಮಾರಂಭವನ್ನು ಕಲಾವಿದರು ಯಲ್ಲಪ್ಪ ಹೆಗಡೆ ಉಪನ್ಯಾಸಕರು ಹಾಗೂ ನಟ ಶ್ರೀಕಾಂತ್ ಗಸ್ತಿಯವರು ಈ ವಿಶೇಷ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಯಶಸ್ವಿಯಾದರು. ಇವರ ಸಹಾಯಕರಾಗಿ ಬಸು, ಶಿವಾನಂದ, ವಿಶಾಲರವರು ಎಲೆ ಮರೆಯ ಕಾಯಿಯಂತೆ ಸರ್ವ ಸಹಕಾರಕ್ಕೆ ಕೈ ಜೋಡಿಸಿದರು.
ವರದಿ : ರಾಜು ಮುಂಡೆ