ಚನ್ನಮ್ಮನ ಕಿತ್ತೂರ: -ಭಾರತದ ಸ್ವಾತಂತ್ರ್ಯದ ಬೆಳ್ಳಿ ಚುಕ್ಕಿ ಬ್ರಿಟಿಷರ ವಿರುದ್ಧ ಹೋರಾಡಿದ ಪ್ರಪ್ರಥಮ ವೀರ ಮಹಿಳೆ ವೀರ ರಾಣಿ ಕಿತ್ತೂರ ಚನ್ನಮ್ಮನ ಇತಿಹಾಸ. ತ್ಯಾಗ ಬಲಿದಾನ ಜೀವನ ಚರಿತ್ರೆ. ಹೇಳುವಂತ ಕಿತ್ತೂರಿನಲ್ಲಿ ರಾಣಿ ಚನ್ನಮ್ಮನ ರಾಕ್ ಗಾರ್ಡನ್ ಯಾವತ್ತೂ ನಿರ್ಮಾಣ ಮಾಡಬೇಕ ಇತ್ತು ಯಾಕ್ಕೊ ಸರ್ಕಾರ ಇದರ ಬಗ್ಗೆ ಗಮನ ಹರಿಸುತ್ತಿಲ್ಲ.ಸಂಗೋಳಿ ಗ್ರಾಮದಲ್ಲಿ ಕ್ರಾಂತಿ ವೀರ ರಾಯಣ್ಣ ರಾಕ್ ಗಾರ್ಡನ್ ನಿರ್ಮಾಣ ಆಗಿದೆ.ಯಾಕೆ ಸರ್ಕಾರಗಳು ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದ ಕಣ್ಣಿಗೆ ಸುಣ್ಣ ಹಚುವಂತ ಕೆಲಸ ಮಾಡತ್ತಿದೆ ಅಂತ ಅರ್ಥ ಆಗತ್ತಿಲ್ಲ
ವೀರ ರಾಣಿ ಕಿತ್ತೂರ ಚನ್ನಮ್ಮನ ಪ್ರವಾಸಿ ತಾಣವನ್ನು ಅಭಿವೃದ್ಧಿ ಪಡಿಸುವಲ್ಲಿ ತಾರತಮ್ಯ ಯಾಕೆ ಇವತ್ತಿನ ದಿನಗಳಲ್ಲಿ ರಾಜ್ಯದಲ್ಲಿ ಇರುವ ಎಷ್ಟ ಪ್ರವಾಸಿ ತಾಣಗಳು ಸಾಕಷ್ಟು ಅಭಿವೃದ್ಧಿ ಆಗಿವೆ ಆದರೆ ಕಿತ್ತೂರಿನ ಪ್ರವಾಸಿ ತಾಣ ಯಾಕೆ ಅಭಿವೃದ್ಧಿ ಆಗತ್ತಿಲ್ಲ ಮೂಲಭೂತ ಸೌಕರ್ಯಗಳು ಆಗತ್ತಿಲ್ಲ. ಕಿತ್ತೂರಿನ ಪ್ರವಾಸಿ ತಾಣ ನೋಡಲು ಬಂದ ಪ್ರವಾಸಿಗರಿಗೆ ಗೈಡ್ ಮಾಡುವದಕ್ಕೆ ಗೈಡ್ಸ್ ಇಲ್ಲ ಯಾತ್ರಿ ನಿವಾಸ ಇಲ್ಲ ಎಷ್ಟ ಸರ್ಕಾರಗಳು ಅಧಿಕಾರಕ್ಕೆ ಬಂದು ಹೊದುವು ಕಿತ್ತೂರಿನ ಬಗ್ಗೆ ಚನ್ನಮ್ಮನ ಹೋರಾಟ ಬಗ್ಗೆ ಭಾಷಣ ಮಾಡತ್ತಾರೆ ಹೊಗತ್ತಾರೆ ಆದರೆ ಪ್ರವಾಸಿ ತಾಣ ಅಭಿವೃದ್ಧಿ ಮಾತ್ರ ಸೂನ್ಯ. ಚನ್ನಮ್ಮನ ಇತಿಹಾಸ ಹೇಳುವ ಕೋಟೆ ಆವರಣದಲ್ಲಿ ಧ್ವನಿ ಬೆಳಕು ಮಾಡಲಾಗಿತ್ತು ಅದು ಸಹ ಬಂದ ಆಗಿ ಮೊಲೆ ಗುಂಪು ಆಗಿದೆ. ಪ್ರವಾಸ ಉದ್ಯಮ ಸಚಿವರು ಎಲ್ಲಿ ಇದ್ದಿರ್ರಿ ಬೆಳಗಾವಿ ಜಿಲ್ಲೆಯಲ್ಲಿ ಐತಿಹಾಸಿಕ ವೀರ ರಾಣಿ ಚನ್ನಮ್ಮನ ಪ್ರವಾಸಿ ತಾಣ ಇದೆ ಅಂತ ಪ್ರವಾಸ ಉದ್ಯಮ ಸಚಿವರಿಗೆ ನೆನಪು ಇದಿಯಾ.
ಈ ವರ್ಷ ಕಿತ್ತೂರಿನ ವಿಜಯೋತ್ಸವ 200 ನೇ ವರ್ಷ ಆಚರಣೆ ಮಾಡುತ್ತಿದ್ದು ಅಷ್ಟರ ಒಳಗೆ ಕಿತ್ತೂರಿನ ಕೋಟೆ ಆವರಣದಲ್ಲಿ ಇರುವ ತೋಟಗಾರಿಕೆ ತೆರವು ಗೊಳಿಸಿ ಅಲ್ಲಿ ಕಿತ್ತೂರ ಚನ್ನಮ್ಮನ ರಾಕ್ ಗಾರ್ಡನ್ ನಿರ್ಮಾಣ ಮಾಡಲು ವಿಜಯೋತ್ಸವ ದಿನವೇ ಭೊಮಿ ಪೂಜೆ ಮಾಡಬೇಕು ಮತ್ತು ಮುಂದಿನ ದಿನಗಳಲ್ಲಿ ರಾಕ್ ಗಾರ್ಡನ್ ನಿರ್ಮಾಣ ಕಾಮಗಾರಿ ಪ್ರಾರಂಭದ ಮಾಡಬೇಕು.ವೀರ ರಾಣಿ ಚನ್ನಮ್ಮನ ಇತಿಹಾಸ ಹೇಳುವಂತಹ ರಾಣಿ ಚನ್ನಮ್ಮನ ರಾಕ್ ಗಾರ್ಡನ್ ನಿರ್ಮಾಣ ಮಾಡವದರ ಬಗ್ಗೆ ಸರ್ಕಾರ ಮತ್ತು ಜನಪ್ರತಿನಿಧಿಗಳು ಗಮನ ಹರಿಸುತ್ತಾರಾ ಕಾದುನೊಡಬೇಕು
ವರದಿ: ಬಸವರಾಜ ಭೀಮರಾಣಿ. ಜಗದೀಶ ಕಡೋಲಿ