————————————ಒಂದು ಅಂಕಕ್ಕೆ ಸಮಾಧಾನ ಪಟ್ಟ ಮಯಾಂಕ್ ಪಡೆ
ರಾಜಕೋಟ: ಕರ್ನಾಟಕ ಹಾಗೂ ಸೌರಾಷ್ಟ್ರ ತಂಡಗಳ ನಡುವೆ ಇಲ್ಲಿ ನಡೆದಿದ್ದ ಎಲೈಟ್ ‘ಬಿ’ ಗುಂಪಿನ ಮೊದಲ ಲೀಗ್ ಪಂದ್ಯ ಡ್ರಾದಲ್ಲಿ ಅಂತ್ಯ ಕಂಡಿತು.
ಅಂಧೇರಿಯ ನಿರಂಜನ್ ಶಹಾ ಕ್ರೀಡಾಂಗಣದಲ್ಲಿ ಇಂದಿಲ್ಲಿ ನಾಲ್ಕನೇ ಹಾಗೂ ಅಂತಿಮ ದಿನದ ಪಂದ್ಯ ಮುಕ್ತಾಯವಾದಾಗ ಸೌರಾಷ್ಟ್ರ ತನ್ನ ಎರಡನೇ ಸರದಿಯಲ್ಲಿ 5 ವಿಕೆಟ್ ಗೆ 128 ರನ್ ಗಳಿಸಿತ್ತು. ಇದರೊಂದಿಗೆ ಸೌರಾಷ್ಟ್ರ ತಂಡ ಮೊದಲ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ 3 ಅಂಕಗಳಿಸಿದರೆ, ಕರ್ನಾಟಕ 1 ಅಂಕಕ್ಕೆ ಸಮಾಧಾನ ಪಡಬೇಕಾಯಿತು.
ಸ್ಕೋರ್ ವಿವರ
ಕರ್ನಾಟಕ 372 ಹಾಗೂ 232
ಸೌರಾಷ್ಟ್ರ 376 ಹಾಗೂ 5 ವಿಕೆಟ್ ಗೆ 128
ಪಂದ್ಯ ಶ್ರೇಷ್ಠ: ಧರ್ಮೇಂದ್ರಸಿಂಗ್ ಜಡೆಜಾ




