ಸೇಡಂ: ತಾಲೂಕಿನ ರಂಜೋಳ ಗ್ರಾಮದ ಕುಂಬಾರ ಗಲ್ಲಿಯ ಕಡೆ ಸುಮಾರು ಆರು ತಿಂಗಳಿನಿಂದ ಕುಡಿಯುವ ನೀರು ಪೂರೈಕೆಯಾಗುತ್ತಿಲ್ಲ.ಇದರ ಬಗ್ಗೆ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯವರಿಗೆ ಆರು ತಿಂಗಳಿನಿಂದ ಗಮನಕ್ಕೆ ತಂದರೆ ಜನರ ಸಮಸ್ಯಗೆ ಸ್ಪಂದಿಸುತ್ತಿಲ್ಲ. ಸರಿಯಾಗಿ ಕರ್ತವ್ಯಕ್ಕೆ ಹಾಜರಗುತ್ತಿಲ್ಲ ಮತ್ತು ಜನರ ಸಮಸ್ಯೆ ಕಡೆಗಣಿಸುತಿದ್ದಾರೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಿಮಗೆ ನಾನು ದೂರವಾಣಿ ಮೂಲಕ ಅದೆಷ್ಟೋ ಬಾರಿ ಮನವಿ ಮಾಡಿದರು ಪಂಚಾಯತ್ ಅಧಿಕಾರಿಗಳು ನಿಮ್ಮ ಜವಾಬ್ದಾರಿಗಳನ್ನು ಮರೆತಿದ್ದಾರೆ.
ಪೋನ್ ಇನ್ ಕಾರ್ಯಕ್ರಮದಲ್ಲೂ ಜೆಜೆಎಮ್ ಕಾಮಗಾರಿ ಸಂಪೂರ್ಣ ಕಳಪೆ ಕಾಮಗಾರಿ ಮಾಡಿ ಸರಿಯಾಗಿ ನೀರು ಪೂರೈಕೆ ಆಗುತ್ತಿಲ್ಲ ಎಂದು ನಿಮ್ಮ ಗಮನಕ್ಕೆ ತಂದಿದ್ದೆನೆ. ತಾವುಗಳು ಪೋನ್ ಇನ್ ಕಾರ್ಯಕ್ರಮ ಆದ ನಂತರ ಯಾರ ಸಮಸ್ಯಗೆ ಸ್ಪಂದಿಸಿಲ್ಲ . ಮನವಿ ಮಾಡಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ ಅದರಿಂದ ನಾಳೆ ರಂಜೋಳ್ ಗ್ರಾಮ ಪಂಚಾಯಿತಿ ಆವರಣ ಹತ್ತಿರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂತೋಷ ಕುಮಾರ ನಾಯಕೋಡಿ ಅವರು ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ವರದಿ: ವೆಂಕಟಪ್ಪ ಕೆ ಸುಗ್ಗಾಲ್




