ನವದೆಹಲಿ : ಬಾಲಿವುಡ್ ನಿರ್ದೇಶಕ ರೇಪ್ ಕೇಸ್ ನಲ್ಲಿ ಅಂದರ್ ಆಗಿದ್ದಾನೆ. ಮಹಾ ಕುಂಭಮೇಳದಲ್ಲಿ ವೈರಲ್ ಆಗಿದ್ದ ಮೊನಾಲಿಸಾಗೆ ಸಿನಿಮಾ ಆಫರ್ ಮಾಡಿದ್ದ ನಿರ್ದೇಶಕ ಸನೋಜ್ ಮಿಶ್ರಾ ಅವರನ್ನು ಅತ್ಯಾಚಾರ ಪ್ರಕರಣದಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದಾರೆ.
ಸನೋಜ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್ ತಿರಸ್ಕರಿಸಿದ್ದು, ಹೀರೋಯಿನ್ ಆಗಬೇಕೆಂದು ಆಸೆಪಟ್ಟಿದ್ದ ಸಣ್ಣ ಪಟ್ಟಣದ ಹುಡುಗಿಯ ಮೇಲೆ ಸನೋಜ್ ಹಲವು ಬಾರಿ ಅತ್ಯಾಚಾರ ಎಸಗಿದ್ದಾರೆಂದು ಆರೋಪಿಸಲಾಗಿದೆ.
ಇನ್‌ಸ್ಟಾಗ್ರಾಮ್ ಮೂಲಕ ಸನೋಜ್ ಅವರ ಪರಿಚಯವಾಗಿತ್ತು ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾಳೆ. ಹಲವು ಬಾರಿ ಹುಡುಗಿಯನ್ನು ಭೇಟಿಯಾಗಿದ್ದ ಸನೋಜ್ ಲೈಂಗಿಕವಾಗಿ ಬಳಸಿಕೊಂಡಿದ್ದನು ಎನ್ನಲಾಗಿದೆ.
ಇತ್ತೀಚೆಗೆ ಸನೋಜ್ ಮಿಶ್ರಾ ಹೆಸರು ಎಲ್ಲೆಡೆ ಜೋರಾಗಿ ಹರಿದಾಡಿತ್ತು. ಮೊನಾಲಿಸಾಗೆ ಚಾನ್ಸ್ ನೀಡುವ ಮೂಲಕ ಎಲ್ಲೆಡೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದರು.