ನಿಪ್ಪಾಣಿ : ಕೊಲ್ಲಾಪುರ ಜಿಲ್ಲೆಯ ಪನಾಳಾ ತಾಲೂಕಿನ ಖೋತವಾಡಿ ಗ್ರಾಮದ ತೋಟಪಟ್ಟಿ ಪ್ರದೇಶದಲ್ಲಿಯ ಯುವರಾಜ ಗಾವಡೆ ಅವರಿಗೆ ಸೇರಿದ 21 ಗುರಿಗಳನ್ನು ಕಳ್ಳತನ ಮಾಡಿದ ಘಟನೆಗೆ ಸಂಬಂಧಿಸಿ ಕ್ಷಿಪ್ರ ಕಾರ್ಯಚರನೆ ನಡೆಸಿದ ಪನ್ನಾಳ ಪೊಲೀಸರು ಸಿಸಿಟಿವಿ ಮಾಧ್ಯಮದಿಂದ ಬೆಳಗಾವಿ ಜಿಲ್ಲೆಯ ಇಬ್ಬರೂ ಹಾಗೂ ಚಂದಗಡ್ ತಾಲೂಕಿನ ಓರ್ವ ಸೇರಿ ಮೂವರು ಆರೋಪಿಗಳನ್ನು ಪತ್ತೆ ಹಚ್ಚಿ 2 ಲಕ್ಷ 50 ಸಾವಿರ ರೂಪಾಯಿಗಳ ವಸ್ತುಗಳ ಸಮೇತ ಬಂಧಿಸಿದ್ದಾರೆ.
ಘಟನೆಯ ಕುರಿತು ಪನಾಳ ಪೊಲೀಸ್ ಠಾಣೆಯಿಂದ ತಿಳಿದ ಅಧಿಕ ಮಾಹಿತಿಯಂತೆ ಡಿಸೆಂಬರ್ 27ರಂದು ಪನಾಳ ತಾಲೂಕಿನ ಖೋತವಾಡಿ ಗ್ರಾಮದ ಹೊಲದಲ್ಲಿ ಯುವರಾಜ ಗಾವಡೆ ಅವರಿಗೆ ಸೇರಿದ 21 ಕುರಿಗಳು ಕಳ್ಳತನವಾದ ಬಗ್ಗೆ ಪನಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿತ್ತು.
ಅದರಂತೆ ಪನಾ ಳ ಪೊಲೀಸ್ ಠಾಣೆಯ ಏಎಸ್ಐ ಶಾಂತರಾಮ ಡೊಯಿ ಫೂಡೆ ಸಮೀರ್ ಮುಲ್ಲಾ ಹಾಗೂ ರವೀಂದ್ರ ಕಾಂಬಳೆ ಮೂರು ವಿವಿಧ ಸ್ಥಳಗಳಲ್ಲಿಯ ಸಿಸಿಟಿವಿ ಪುಟೇಜ್ ಪರಿಶೀಲಿಸಿದಾಗ ಕಳ್ಳರು ಪನ್ನಾಳ ಪೊಲೀಸ್ ಠಾಣೆಯ ವ್ಯಾಪ್ತಿ ಬಿಟ್ಟು ಕರ್ನಾಟಕದತ್ತ ಪ್ರಯಾಣಿಸಿದ ಬಗ್ಗೆ ತಿಳಿದು ಬೆಳಗಾವಿಯ ಮೊಹಮ್ಮದ್ ಶಾಹಿದ್ ಮೊಹಮ್ಮದ್ ಗೌಸ್ ಕಾಕರ, ಹಾಗೂ ಹುಕ್ಕೇರಿ ತಾಲೂಕಿನ ಹಂಜ್ಯಾನಟ್ಟಿ ಗ್ರಾಮದ ಮೇಹಬೂಬ್ ಅಬ್ದುಲ್ ಮುಲ್ತಾನಿ ಈ ಮೂವರನ್ನು ಬಂಧಿಸಿದ್ದಾರೆ. ಅಧಿಕ ತಪಾಸಣೆ ಮುಂದುವರಿಸಿದ್ದಾರೆ.
ವರದಿ : ಮಹಾವೀರ ಚಿಂಚಣೆ.