ರಶ್ಮಿಕಾ ಮಂದಣ್ಣ ಅವರು ಸಿನಿಮಾ ರಂಗದಲ್ಲಿ ಗಮನ ಸೆಳೆಯುವುದರ ಜೊತೆಗೆ ಸೋಶಿಯಲ್ ಮೀಡಿಯಾದಲ್ಲೂ ಅಪಾರ ಜನ ಮನ್ನಣೆ ಪಡೆಯುತ್ತಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅವರಿಗೆ ಬರೋಬ್ಬರಿ 4.6 ಕೋಟಿ ಹಿಂಬಾಲಕರು ಇದ್ದಾರೆ. ಅವರಿಗಾಗಿ ರಶ್ಮಿಕಾ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಫೋಟೋಗೆ ಭರ್ಜರಿ ಲೈಕ್ಸ್ ಸಿಕ್ಕಿದೆ.

ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರೋ ಕಲಾವಿದರು, ಅದರಲ್ಲೂ ನಟಿ ಮಣಿಯರು ಸೋಶಿಯಲ್ ಮೀಡಿಯಾನ ಹೆಚ್ಚು ಬಳಕೆ ಮಾಡುತ್ತಾರೆ. ವಿವಿಧ ರೀತಿಯ ಫೋಟೋಗಳನ್ನು ಹಂಚಿಕೊಂಡು ಗಮನ ಸೆಳೆಯುತ್ತಾರೆ. ಇದಕ್ಕೆ ನಟಿ ರಶ್ಮಿಕಾ ಮಂದಣ್ಣ ಕೂಡ ಹೊರತಾಗಿಲ್ಲ.

ರಶ್ಮಿಕಾ ಮಂದಣ್ಣ ಅವರು ಸದ್ಯ ಕಪ್ಪು ಉಡುಗೆಯಲ್ಲಿ ಮಿಂಚಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ಗಮನ ಸೆಳೆದಿವೆ. ಈ ಫೋಟೋಗೆ ಕೇವಲ 10 ಗಂಟೆಗಳಲ್ಲಿ 10 ಲಕ್ಷಕ್ಕೂ ಅಧಿಕ ಲೈಕ್ಸ್ ಸಿಕ್ಕಿದೆ ಅನ್ನೋದು ವಿಶೇಷ.
ಈ ಪೋಸ್ಟ್ನಲ್ಲಿ ಅವರು ತಮ್ಮ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ರಶ್ಮಿಕಾ ತಂಡ ತುಂಬಾನೇ ದೊಡ್ಡದಾಗಿದೆ. ಅವರಿಗಾಗಿ ಡ್ರೆಸ್ ತಯಾರಿಸುವವರು, ಮೇಕಪ್ ಮಾಡಿಕೊಡುವರು ಹೀಗೆ ಅವರು ವೇದಿಕೆ ಮೇಲೆ ಬರುವಾಗ ಅನೇಕರ ಶ್ರಮ ಇರುತ್ತದೆ.




