ಚಿಂಚೋಳಿ:ಕಲಬುರಗಿ ಜಿಲ್ಲೆಯ ರಟಕಲ್ ಗ್ರಾಮದಲ್ಲಿ ಜಾತಿ ನಿಂದನೆ ಪದ ಬಳಕೆ ಮಾಡಿದ ಹಿನ್ನಲೆಯಲ್ಲಿ ರಟಕಲ್ ಪೊಲೀಸ್ ಠಾಣೆಯ ಪಿಎಸ್ಐ ಯಾದ ಗಂಗಮ್ಮ ರವರು 16/01/2025/ ರಂದು ಚಿಂಚೋಳಿ ತಾಲೂಕಿನ ಜಮೀನು ವಿವಾದ ವಿಚಾರಣೆ ಮಾಡುವ ಸಂದರ್ಭದಲ್ಲಿ ರಟಕಲ್ ಠಾಣೆಯ ಪಿಎಸ್ಐ ರವರು ದಲಿತ ಸಮುದಾಯದ ಕುರಿತು ಅವಹೇಳನ ಪದ ಬಳಕೆ ಮಾಡಿದ್ದು. ವಿವಿಧ ದಲಿತ ಸಂಘಟನೆಗಳ ಆಕ್ರೋಶ ಹಿನ್ನಲೆಯಲ್ಲಿ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲೆ ಮಾಡಿ ಎಂದು 19/01/2025 ರಂದು ಮಾನ್ಯ ಹೆಚ್ಚುವರಿ ಪೊಲೀಸ್ ಅಧ್ಯಿಕ್ಷರು ಕಲಬುರಗಿ ಜಿಲ್ಲಾ ರವರಿಗೆ ಬಹುಜನ ಹೋರಾಟ ಸಮಿತಿ ವತಿಯಿಂದ ರಟಕಲ್ ಪಿಎಸ್ಐ ಅಮಾನತಿಗೆ ಒತ್ತಾಯಿಸಿ ಮನವಿ ಮಾಡಲಾಗಿತ್ತು.
ಪ್ರಕರಣದ ಗಂಭೀರತೆ ಅರಿತ ಮಾನ್ಯ S.P ಅವರು ಮುಂದಿನ ಅಮಾನತು ಮಾಡಿದ್ದಾರೆ. ಈ ಸಂದರ್ಭದಲ್ಲಿ ಬಹುಜನ ಹೋರಾಟ ಸಮಿತಿ ಜಿಲ್ಲಾ ಅಧ್ಯಕ್ಷರಾದ ರವಿ ಆರ್ ಕೋರಿ.ಉಪಾಧ್ಯಕ್ಷರಾದ ಅಂಬಾರಾಯ ದಸ್ತಾಪೂರ.ಜಿಲ್ಲಾ ಮುಖಂಡರಾದ.ವಿಠ್ಠಲ ಕೋಣೆಕರ. ಸೀಖಾಮಣಿ.ಅರುಣ ಅಂಕಲಗಿ.ಶ್ರೀನಿವಾಸ ಕೆಂಚೆ. ಶಂಭುಲಿಂಗ ಸಿಂಗೆ. ಮತ್ತು ಇನ್ನಿತರರು ಭಾಗವಹಿಸಿದ್ದರು.
ವರದಿ:ಸುನಿಲ್ ಸಲಗರ




