ಚಿಂಚೋಳಿ: ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣದಲ್ಲಿ ತಾಲೂಕ ಮಟ್ಟದ ಶ್ರೀ ಶ್ರೀ ಆದಿ ರೇಣುಕಾಚಾರ್ಯರ ಜಯಂತೋತ್ಸವ ಮತ್ತು ಶ್ರೀಮದ ರೇವಣಸಿದ್ದೇಶ್ವರ ದೇವಸ್ಥಾನ ಅಡಿಗಲ್ಲು ಸಮಾರಂಭ ಜರಗಿತ್ತು ಅಡಿಗಲ್ಲು ಸಮಾರಂಭವನ್ನು ಶ್ರೀ ಸಿಂಹಾಸನಾಧೀಶ್ವರ.ಉಜ್ಜಯಿನಿ ಶ್ರೀ ಶ್ರೀ ಶ್ರೀ 1008 ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಮಹಾಭಗವತ್ಪಾದರು ಉಜ್ಜಯಿನಿ ಪೀಠ. ಹಾಗೂ ಶ್ರೀಮದ ಕಾಶಿ ಜ್ಞಾನ ಸಿಂಹಾಸನಾಧೀಶ್ವರ ಶ್ರೀ ಶ್ರೀ ಶ್ರೀ 1008 ಜಗದ್ಗುರು ಡಾ|| ಮಲ್ಲಿಕಾರ್ಜುನ ವಿಶ್ವಾರಾಧ್ಯ ಶಿವಾಚಾರ್ಯ ಭಗವತ್ಪಾದರು ಕಾಶಿ ಪೀಠ, ಅವರು ದೇವಾಲಯ ಅಡಿಗಲ್ಲು ಮತ್ತು ಜಯಂತೋತ್ಸವ ಕಾರ್ಯಕ್ರಮಕ್ಕೆ ಚಲನೆಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ನಿಡಗುಂದಿ ಶ್ರೀಗಳಾದ ಕರುಣೆಶ್ವೇರ ಶಿವಾಚಾರ್ಯರು, ಶ್ರೀ ಆದಿ ರೇಣುಕಾಚಾರ್ಯ ಜಯಂತೋತ್ಸವ ಸಮಿತಿಯ ಅಧ್ಯಕ್ಷರಾದ ಶಿವಬಸಯ್ಯ ಎಸ್ ಸ್ವಾಮಿ, ಬೀದರ್ ಲೋಕಸಭಾ ಸದಸ್ಯರಾದ ಸಾಗರ್ ಖಂಡ್ರೆ, ಕಾಂಗ್ರೆಸ್ ಪಕ್ಷದ ಮುಖಂಡರಾದ ಸುಭಾಸ ರಾಠೋಡ್,ಪುರಸಭೆ ಅಧ್ಯಕ್ಷರಾದ ಆನಂದ್ ಟೈಗರ, ಅನೇಕ ಮಠಾಧೀಶರು ಮತ್ತು ಅನೇಕ ವಿವಿಧ ಪಕ್ಷ ಮುಖಂಡರು ಹಾಗೂ ಜಯಂತೋತ್ಸವ ಸಮಿತಿಯ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ವರದಿ: ಸುನಿಲ್ ಸಲಗರ